ಮಂಗಳೂರು : ಮಂಗಳೂರು ಹೊರವಲಯದ ಉಳಾಯಿಬೆಟ್ಟು ದರೋಡೆ ಘಟನೆಗೆ ಸಂಬಂಧಿಸಿ ಸ್ಥಳೀಯ ಪಂಚಾಯಿ ಸದಸ್ಯನ ಸಹಿತ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಮೂವರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಅಂತಾರಾಜ್ಯದವರು. ಇನ್ನೂ ನಾಲೈದು ಮಂದಿಗೆ ಹುಡುಕಾಟ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ವಿವರ ನೀಡಿದರು
10 ಮಂದಿ ಆರೋಪಿಗಳು: ನೀರುಮಾರ್ಗ ಒಂಟೆಮಾರ್‌ನಿವಾಸಿ ವಸಂತ ಕುಮಾರ್ ಯಾನೆ ವಸಂತ ಪೂಜಾರಿ (42),ರಮೇಶ ಪೂಜಾರಿ (42) ಪೆರುವಾಯಿ ಮುಕುಡಾಪು ನಿವಾಸಿ ರೈಮಂಡ್ ಡಿಸೋಜ (47), ಪೈವಳಿಕೆ ಕುರುಡುಪದವು ನಿವಾಸಿ ಬಾಲಕೃಷ್ಣ ಶೆಟ್ಟಿ ಯಾನೆ ಬಾಲಣ್ಣ (48), ತ್ರಿಶೂರ್‌ನವರಾದ ಜಾಕೀರ್‌ಯಾನೆ ಶಾಕೀರ್ ಹುಸೈನ್ (56), ವಿನೋಜ್ ಪಿ.ಕೆ ಯಾನೆ ಎನ್ನು(38), ಸಜೀಶ್ (32), ಬಿಜು ಜಿ (41), ಸತೀಶ್ ಬಾಬು (44) ಮತ್ತು ಶಿಜೋ ದೇವಸ್ತಿ (38) ಬಂಧಿತರು.
ಜೂನ್ 21ರಂದು ಉಳಾಯಿಬೆಟ್ಟು బళియ ಪೆರ್ಮಂಕಿ ಎಂಬಲ್ಲಿನ ನಿವಾಸಿ ಗುತ್ತಿಗೆದಾರ, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್ ಎಂಬವರ ಮನೆಯಲ್ಲಿ ದರೋಡೆ ನಡೆದಿತ್ತು. ರಾತ್ರಿ ವೇಳೆ ಮನೆಗೆ ನುಗ್ಗಿದ ತಂಡ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿ ನಗದು ಸೇರಿದಂತೆ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿತ್ತು. ಭಾರಿ ಕುತೂಹಲ ಮೂಡಿಸಿದ್ದ ಈ ಪ್ರಕರಣವನ್ನು ಪೊಲೀಸರು 13 ದಿನಗಳಲ್ಲಿ ಪತ್ತೆಹಚ್ಚಿದ್ದಾರೆ.