121
ಮೈಸೂರು : ಬೆಂಗಳೂರು, ಮಂಗಳೂರು, ಬೆಳಗಾವಿ ಬಳಿಕ ಈಗ ಮೈಸೂರಲ್ಲೂ ಡ್ರಗ್ಸ್ ಜಾಲದ ನಂಟು ಬಯಲಾಗಿದ್ದು ಮೈಸೂರಿನಲ್ಲೇ ಮಾದಕ ವಸ್ತು ತಯಾರಿಕಾ’ ಫ್ಯಾಕ್ಟರಿ ನಡೆಯುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಖಚಿತ ಸುಳಿವಿನ ಮೇರೆಗೆ ಮಹಾ ರಾಷ್ಟ್ರ ಪೊಲೀಸರು ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ಭಾನುವಾರ ಎಂಡಿಎಂಎ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ, 13 ಕೆ.ಜಿ. ಎಂಡಿಎಂಎ, 37 ಕೆ.ಜಿ. ದ್ರವರೂಪದ ಡ್ರಗ್ಸ್ ಪತ್ತೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸರಿಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ
ವಿಶೇಷವೆಂದರೆ, ಇಲ್ಲಿನ ಡ್ರಗ್ಸ್ ತಯಾರಿಕಾ ಘಟಕದಿಂದ ಮಹಾರಾಷ್ಟ್ರಕ್ಕೆ ಡ್ರಗ್ಸ್ ಪೂರೈಸಲಾಗುತ್ತಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ದಾಳಿ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅವರನ್ನು ಅಮಾನತುಗೊಳಿಸಲಾಗಿದೆ.
# ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮಾದಕ ವಸ್ತು ಪೂರೈಕೆದಾರನೊಬ್ಬನನ್ನು ಬಂಧಿಸಿದ್ದ ಮಹಾರಾಷ್ಟ್ರ
ಪೊಲೀಸರ ವಿಚಾರಣೆ ವೇಳೆ ತಾನು ಮೈಸೂರಿನಿಂದ ಮಾದಕ ವಸ್ತು ತಂದು ರಾಜ್ಯದಲ್ಲಿ ಮಾರಾಟ
ಮಾಡುತ್ತಿದ್ದ ಬಗ್ಗೆ ಆತ ಮಾಹಿತಿ
# ಈ ಹಿನ್ನೆಲೆಯಲ್ಲಿ ಮೈಸೂರಿನ ರಿಂಗ್ ರಸ್ತೆಯ ಕಟ್ಟಡವೊಂದರ ಮೇಲೆ ಮಹಾರಾಷ್ಟ್ರ ಪೊಲೀಸರ ದಾಳಿ
# ದಾಳಿ ವೇಳೆ 13 ಕೆ.ಜಿ.ಎಂಡಿಎಂಎ, 37 ಕೆ.ಜಿ. ದ್ರವರೂಪದ ಡ್ರಗ್ಸ್ ಪತ್ತೆ. ಪ್ರಕರಣ ಸಂಬಂಧ ನಾಲ್ವರು ಬಂಧನ

