6.80.000 ಮೌಲ್ಯದ E-ಸೀಗರೇಟ್ ವಶ
ಮಂಗಳೂರು:ಮಂಳೂರು ಪೋಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ರವರ ಮಾರ್ಗದರ್ಶನದಲ್ಲಿ ಕೇಂದ್ರ ಉಪ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು ಬರ್ಕೆ ಪೋಲೀಸ್ ಠಾಣಾ ವ್ಯಾಪ್ತಿಯ ಸಾಯಿಬಿನ್ ಕಾಂಪ್ಲೆಕ್ಸ್ ಗೆ ದಾಳಿ ಮಾಡಿ ಅಲ್ಲಿ ಮಾರಾಟ ಮಾಡುತ್ತಿದ್ದ E-ಸೀಗರೇಟ್ ಗಳನ್ನು ವಶಪಡಿಸಿಕೊಂಡು 7 ಜನರನ್ನು ಬಂಧಿಸಲಾಗಿದೆ
ಖಚಿತ ಮಾಹಿತಿಯ ಮೇರೆಗೆ ಸಾಯಿಬಿನ್ ಕಾಂಪ್ಲೆಕ್ಸ್ ನಲ್ಲಿನ ಆಮಂತ್ರಣ ಶಾಫ್ ಫ್ಯಾಂಟ್ಯಾಸ್ಟಿಕ್ ವರ್ಲ್ಡ್ ಯುನಿಕ್ ಪರ್ಲ್ ಡೂ-ಇಟ್ ಫ್ಯಂಟ್ಯಾಸ್ಟಿಕ್ ಶಾಫ್ ವೆಂಚರ್ ಅಂಗಡಿಗಳ ಮೇಲೆ ದಾಳಿ ನೆಡೆಸಿದ ಪೋಲೀಸರು 1.50.000 ಮೌಲ್ಯದ 273 E-ಸೀಗರೇಟ್ ಗಳನ್ನು ಹಾಗೂ ಕೊಟ್ಟಾ ಕಾಯ್ದೆಯಡಿ ಪ್ರಕರಣ ದಾಖಲಿಸಿ 5.30.000 ಮೌಲ್ಯದ ಎಚ್ಚರಿಕೆಯ ಚಿಹ್ನೆಯನ್ನು ಅಳವಡಿಸದ ವಿವಿಧ ಕಂಪೆನಿಗಳ ಸೀಗರೇಟ್ ತುಂಬಿರುವ ಪ್ಯಾಕ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಇವುಗಳ ಒಟ್ಟು ಮೌಲ್ಯ 6.80.000 ಆಗಿದೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರೆಹಮತ್ತುಲ್ಲಾ ಸಂತೋಷ ಶಿವು ಹಸನ್ ಶಿವಾನಂದ ಶರೀಫ್ ಇರ್ಷಾದ್ ಎಂಬವರನ್ನು ಬಂಧಿಸಿ E-ಸೀಗರೇಟ್ ನಿಷೇಧ ಕಾಯ್ದೆ 2019 ಹಾಗೂ ಕೊಟ್ಟಾ ಕಾಯ್ದೆಯಡಿ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ