Home » ಬೆಂಗಳೂರು : ಇವಿ ಶೋರೂಂಗೆ ಬೆಂಕಿ
 

ಬೆಂಗಳೂರು : ಇವಿ ಶೋರೂಂಗೆ ಬೆಂಕಿ

by Kundapur Xpress
Spread the love

ಬೆಂಗಳೂರು: ಮೂರು ತಿಂಗಳ ಹಿಂದೆ ಎಲೆಕ್ನಿಕ್ ಬೈಕ್ ಶೋರೂಂ ಬೆಂಕಿಗೆ ಆಹುತಿಯಾಗಿ ಯುವತಿ ಸಜೀವ ದಹನವಾದ ಘಟನೆ ಮಾಸುವ ಮುನ್ನವೇ, ಅಲ್ಲೇ ಪಕ್ಕದ ಮತ್ತೊಂದು ಇವಿ ಶೋರೂಂನಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದೆ.

ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಒಕಿನೋವಾ ಇವಿ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 28ಕ್ಕೂ ಅಧಿಕ ದ್ವಿಚಕ್ರವಾಹನಗಳು ಬೆಂಕಿಯ ಕೆನ್ನಾಲಿಗೆ ಸುಟ್ಟು ಭಸ್ಮವಾಗಿವೆ.

ಸೋಮವಾರ ಮಧ್ಯಾಹ್ನ 2.00 ಗಂಟೆ ವೇಳೆಗೆ ಬೆಂಕಿ ಕಾಣಿಸಿ ಕೊಂಡಿದೆ. ಕ್ಷರ್ಣಾಧದಲ್ಲಿ ಅಗ್ನಿ ವ್ಯಾಪ್ತಿಸಿ ಅನಾಹುತ ಸಂಭವಿಸಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ತಗುಲಿದ ಘಟನೆ ತಿಳಿಯುತ್ತಿದ್ದಂತೇ ಒಳಗಡೆಯಿದ್ದ ನಾಲ್ವರು ಸಿಬ್ಬಂದಿ ಹೊರಗೋಡಿ ಬಂದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿಯಮ ಉಲ್ಲಂಘಿಸಿದ ಶೋ ರೂಂ :

ಒಂದು ವಾರದ ಹಿಂದಷ್ಟೇ ಆರ್‌ಟಿಒ ಅಧಿಕಾರಿಗಳು ಶೋ ರೂಮ್‌ಗೆ ಭೇಟಿ ನೀಡಿ ಸುರಕ್ಷತೆ ಹಾಗೂ ನಿಯಮಗಳ ಪಾಲನೆಯ ಬಗ್ಗೆ ಪರಿಶೀಲನೆ ನಡೆಸಿದ್ದರು. ತಪಾಸಣೆ ವೇಳೆ ಕೆಲ ತಪ್ಪುಗಳು ಕಂಡು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು, ನಿಯಮವನ್ನು ಪಾಲಿಬೇಕು ಎಂದು ಎಚ್ಚರಿಸಿದ್ದರು ಎನ್ನಲಾಗಿದೆ. ತಪಾಸಣೆ ವೇಳೆ 250 ವ್ಯಾಟ್ ಬ್ಯಾಟರಿ ಬಳಕೆಯ 25 ಕೀ.ಮೀ ವೇಗದ ವಾಹನಗಳಿಗೆ ಮಾತ್ರ ಪರವಾನಗಿ ಪಡೆಯಲಾಗಿತ್ತು. ಆದರೆ ಶೋ ರೂಮ್‌ ನಲ್ಲಿ ನಿಗದಿಗಿಂತ ಹೆಚ್ಚ ಸಾಮರ್ಥ್ಯವಿರುವ ಬ್ಯಾಟರಿಯನ್ನು ಬಳಸಲಾಗುತ್ತಿತ್ತು, ಎಂಬ ಅಂಶ ದುರ್ಘಟನೆ ಬಳಿಕ ಬೆಳಕಿಗೆ ಬಂದಿದೆ.

 

Related Articles

error: Content is protected !!