ಕುಂದಾಪುರ: ಕೋಡಿಯ ಬೀಚ್‌ರೋಡ್ ನಿವಾಸಿಯಾದ ಅಹಮ್ಮದ್ ಶರ್ಪೂದ್ದೀನ್ ಇವರು ಕುಂದಾಪುರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವಾಗ ಅಪರಿಚಿತನೊಬ್ಬನು ಅವರ ಬಳಿ ಬಂದು ಒಂದು ಬರ್ಮುಡ ಚಡ್ಡಿಯನ್ನು ಖರೀದಿ ಮಾಡಿ ಹಣವನ್ನು ನೀಡಿ ಬಳಿಕ ಆತನ ಪರ್ಸಿನಿಂದ ದುಬಾಯಿ ದೇಶದಲ್ಲಿ ಚಲಾವಣೆಯಲ್ಲಿರುವ 100 ದಿರಮ್ಸ್ ಮೌಲ್ಯದ ಕರೆನ್ಸಿ ನೋಟನ್ನು ತೋರಿಸಿ ಇದನ್ನು ಎಲ್ಲಿ ಎಕ್ಸ್‌ಚೇಂಜ್ ಮಾಡುತ್ತಾರೆ ಎಂದು ವಿಚಾರಿಸಿದನು
ಅಹಮ್ಮದ್ ಶರ್ಪೂದ್ದೀನ್ ರವರು ಕನಿಕರದಿಂದ 100 ದಿರಮ್ಸ್ ಮೌಲ್ಯಕ್ಕೆ ಅವರ ಬಳಿಯಿದ್ದ 500 ರೂಪಾಯಿಯನ್ನು ಕೊಟ್ಟಿದ್ದು. ಆಗ ಆತನು , “ನನ್ನ ಬಳಿ ಇನ್ನೂ ಇದೇ ರೀತಿಯ ತುಂಬಾ ದಿರಮ್ಸ್ ಕರೆನ್ಸಿ ಇದೆ ಬೇಕಾದಲ್ಲಿ ನೋಡಿ ಕಡಿಮೆ ಮೌಲ್ಯಕ್ಕೆ ಕೊಡ್ತೇನೆ ” ಎಂದು ಹೇಳಿ ಅಹಮ್ಮದ್ ಶರ್ಪೂದ್ದೀನ್ ರವರ ಮೊಬೈಲ್ ನಂಬ್ರ ಪಡೆದುಕೊಂಡು ನಂತರ ಅದೇ ವ್ಯಕ್ತಿಯು ಕರೆ ಮಾಡಿ, “ ನನ್ನ ಬಳಿಯಿದ್ದ ದಿರಮ್ಸ್ ಕರೆನ್ಸಿ ನೋಡಲು ಬರ್ತಿರಾ,” ಎಂದು ಹೇಳಿ ಹಲವಾರು ಬಾರಿ ಸಮಯ ಹಾಗೂ ಸ್ಥಳವನ್ನು ಬದಲಿಸಿ ಅದಕ್ಕೆ ಸಮಜಾಯಿಷಿ ನೀಡಿ ಕೊನೆಗೆ “ ಬ್ರಹ್ಮಾವರಕ್ಕೆ ದಿರಮ್ಸ್ ಕರೆನ್ಸಿ ನೋಡಲು ಬರ್ತಿರಲ್ವಾ ” ಎಂದು ಹೇಳಿರುತ್ತಾನೆ. ಅದರಂತೆ ದಿನಾಂಕ 19/03/2023 ರಂದು ಬೆಳಿಗ್ಗೆ ಅಹಮ್ಮದ್ ಶರ್ಪೂದ್ದೀನ್ ರವರು ಒಂದೂವರೆ ಲಕ್ಷ ರೂಪಾಯಿ ಹಣವನ್ನು ಹಿಡಿದುಕೊಂಡು ಬ್ರಹ್ಮಾವರ ಬಸ್ ಸ್ಟ್ಯಾಂಡ್ ಬಳಿ ಬಂದಾಗ ಆರೋಪಿಯು ಇನ್ನೊಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಲ್ಲಿ ಇದ್ದಿದ್ದು. ಅವರು ಅಹಮ್ಮದ್ ಶರ್ಪೂದ್ದೀನ್ ರವರಲ್ಲಿ ಇಲ್ಲಿ ವ್ಯವಹಾರ ಮಾಡುವುದು ಬೇಡ, ಸ್ವಲ್ಪ ಮುಂದೆ ಹೋಗುವ ಎಂಬುದಾಗಿ ಹೇಳಿ, ಸ್ವಲ್ಪ ಮುಂದೆ ಸತ್ಯನಾಥ ಸ್ಟೋರ್ಸ್ ಬಟ್ಟೆಯಂಗಡಿ ಕಡೆಗೆ ಹೋಗುತ್ತಾ ಸತ್ಯನಾಥ ಸ್ಟೋರ್ಸ್ ಪಕ್ಕದ ರಸ್ತೆಯ ಬಳಿ ಮೋಟಾರ್ ಸೈಕಲ್ ನಿಲ್ಲಿಸಿದಾಗ ಇನ್ನೊಬ್ಬ ಆರೋಪಿಯು ಕೈಯಲ್ಲಿ ಒಂದು ಹಸಿರು ಬಣ್ಣದ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಬಂದಿದ್ದು ಆಗ ಅಹಮ್ಮದ್ ಶರ್ಪೂದ್ದೀನ್ ರವರು ಮೂವರ ಜೊತೆಯಲ್ಲಿ ಮಾತನಾಡಿ ಆರೋಪಿಗಳು ದುಬಾಯಿ ದೇಶದಲ್ಲಿ ಚಲಾವಣೆಯಲ್ಲಿರುವ 100 ದಿರಮ್ಸ್ ಮೌಲ್ಯದ 900 ನೋಟುಗಳು ಇದೆ ಎಂಬುದಾಗಿ ಹೇಳಿದ್ದು ಅಹಮ್ಮದ್ ಶರ್ಪೂದ್ದೀನ್ ರವರ ಬಳಿಯಿದ್ದ ಹಣಕ್ಕೆ ದಿರಮ್ಸ್ ಕೊಡುವುದಾಗಿ ಒಪ್ಪಿ, ಆರೋಪಿಯ ಕೈಯಲ್ಲಿದ್ದ ಹಸಿರು ಬಣ್ಣದ ಪ್ಯಾಕ್ ಮಾಡಿದ ಚೀಲವನ್ನು ಇವರಿಗೆ ಕೊಟ್ಟು ಇದರಲ್ಲಿ ದಿರಮ್ಸ್ ಇದೆ ಎಂದು ಹೇಳಿ ಅಹಮ್ಮದ್ ಶರ್ಪೂದ್ದೀನ್ ರವರು ಪರಿಶೀಲಿಸುವ ಮೊದಲೇ ಆರೋಪಿಗಳು ಇವರ ಕೈಯಲ್ಲಿದ್ದ ಹಣದ ಚೀಲವನ್ನು ಎಳೆದುಕೊಂಡು ಮೂರು ಆರೋಪಿಗಳು ಮೋಟಾರ್ ಸೈಕಲ್ ನಲ್ಲಿ ಪರಾರಿಯಾದರು ನಂತರ ಅಹಮ್ಮದ್ ಶರ್ಪೂದ್ದೀನ್ ರವರು ಅವರಿಗೆ ನೀಡಿದ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ ದಿನಪತ್ರಿಕೆಯ ಹಾಳೆಗಳನ್ನು ಕಟ್ಟು ಮಾಡಿ ಮತ್ತು ನೋಟನ್ನು ಸೇರಿಸಿ ಇಟ್ಟು ಪ್ಯಾಕ್ ಮಾಡಿ ಬಟ್ಟೆಯಿಂದ ಸುತ್ತಿ ಗಂಟು ಕಟ್ಟಿರುವುದಾಗಿದೆ. ಅಪರಿಚಿತ ಮೂರು ವ್ಯಕ್ತಿಗಳು ಒಂದುವರೇ ಲಕ್ಷ ರೂಪಾಯಿ ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ