ಉಡುಪಿ: ಪ್ರತಿಭಾ ಎಸ್. ಹೆಗ್ಡೆ ಇವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಡೆಬಿಟ್ ಕಾರ್ಟ್ ಬ್ಲಾಕ್ ಆಗಿದೆ ಈ ಕೂಡಲೇ ರಿನಿವಲ್ ಮಾಡುವಂತೆ ತಿಳಿಸಿ, ಪ್ರತಿಭಾ ಎಸ್. ಹೆಗ್ಡೆ ವರಿಂದ ಕಾರ್ಡ್ ನಂಬ್ರ ಹಾಗೂ OTP ಯನ್ನು ಪಡೆದು, ಅವರ ಕೆನರಾ ಬ್ಯಾಂಕ್ ಬ್ರಹ್ಮಾವರ ಶಾಖೆಯಲ್ಲಿ ಹೊಂದಿದ್ದ ಖಾತೆಯಿಂದ ಕ್ರಮವಾಗಿ, ರೂಪಾಯಿ 50,000/-, 50,000/-, 2,000/- ಮತ್ತು 2,500/- ರಂತೆ ಒಟ್ಟು 1,04,500/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ವಂಚಿಸಿದ ಬಗ್ಗೆ ಉಡುಪಿಯ ಸೆನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.