196
ಕಾಸರಗೋಡು : ಅಳಿಯನೋರ್ವ ಅತ್ತೆಯ (ತನ್ನ ಪತ್ನಿಯ ತಾಯಿ) ಸ್ನಾನ ಮಾಡುವ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದು ಆಕೆಗೆ ಕಳುಹಿಸಿಕೊಟ್ಟ ವಿಕೃತ ಘಟನೆಯೊಂದು ವರದಿಯಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಆರೋಪಿಯ ವಿರುದ್ದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪತ್ನಿಯ ತಾಯಿ ಮನೆಯಲ್ಲಿ ಈ ಘಟನೆ ನಡೆದಿದೆ. ಅತ್ತೆಗೆ ತಿಳಿಯದಂತೆ ಅಳಿಯ ತನ್ನ ಮೊಬೈಲ್ ಫೋನ್ನಲ್ಲಿ ಸ್ನಾನದ ದೃಶ್ಯಗಳನ್ನು ಚಿತ್ರೀಕರಿಸಿ ನಂತರ ಅತ್ತೆಯ ಮೊಬೈಲ್ ಪೋನ್‌ಗೆ ಕಳುಹಿಸಿಕೊಟ್ಟಿದ್ದ ತಕ್ಷಣ ಪೊಲೀಸ್ ಠಾಣೆಗೆ ತೆರಳಿದ ಗೃಹಿಣಿ ದೂರು ನೀಡಿದ್ದು, ಇದೀಗ ಆರೋಪಿಯನ್ನು ಪೊಲೀಸರು ಸೆರೆ ಹಿಡಿದು ತನಿಖೆಗೆ ಒಳಪಡಿಸಿದ್ದಾರೆ

