Home » ಗಾಂಜಾ ಸೇವನೆ : ಇಬ್ಬರ ಸೆರೆ
 

ಗಾಂಜಾ ಸೇವನೆ : ಇಬ್ಬರ ಸೆರೆ

by Kundapur Xpress
Spread the love

ಕೋಟ : ಬೇಳೂರು ದೇಲಟ್ಟು ಎಂಬಲ್ಲಿ ಗಾಂಜಾ ಸೇವನೆ ಮಾಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಠಾಣೆಯ ಸಬ್ ಇನ್ಸ್ ಪೆಕರ್ ರಾಘವೇಂದ್ರ ಸಿ ಅವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ನಲ್ಲಿದ್ದ ಸಂದರ್ಭ ಗಿಳಿಯಾರಿನ ರಾಘವೇಂದ್ರ (27) ಮತ್ತು ಕುಂದಾಪುರ ತಾಲ್ಲೂಕಿನ ಬೇಳೂರು ಗ್ರಾಮದ ಶಿವರಾಜ್ (32) ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದಿದ್ದು ನೋಟೀಸು ನೀಡಿ ಕಳುಹಿಸಿರುತ್ತಾರೆ.

ಠಾಣೆಗೆ ಬಂದಿದ್ದ ಇಬ್ಬರನ್ನೂ ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರು ಅವರು ಪರೀಕ್ಷಿಸಿ ಗಾಂಜಾ ಸೇವಿಸಿರುವ ಬಗ್ಗೆ ದೃಢಪಡಿಸಿದ್ದಾರೆ  ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!