71
ಉಡುಪಿ : ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಡಯಾನಾ ಟಾಕೀಸ್ ರಸ್ತೆಯ ಕ್ರಾಸ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಲು ಯತ್ನಿಸಿದ್ದ ಆರೋಪಿ, ಬಿಹಾರ ಮೂಲದ ಬ್ರಹ್ಮದೇವ್ ಯಾದವ್ (37) ಎಂಬಾತನನ್ನು ಉಡುಪಿ ಸೆನ್ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ಆರೋಪಿಯಿಂದ 690 ಗ್ರಾಂ ಗಾಂಜಾ, ಮೊಬೈಲ್, ನಗದು 680 ರೂ. ಸಹಿತ ಸೊತ್ತು ವಶಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಉಪಾಧೀಕ್ಷಕ ಎ.ಸಿ.ಲೋಕೇಶ್, ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಎಎಸ್‌ಐ ಉಮೇಶ್, ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್, ರಾಘವೇಂದ್ರ, ವೆಂಕಟೇಶ್, ಸಂತೋಷ್, ಧರ್ಮಪ್ಪ, ದೀಕ್ಷಿತ್, ಅರುಣ್ ಕುಮಾರ್, ಪವನ್, ನೀಲೇಶ್, ಪರಶುರಾಮ್, ಮುತ್ತಪ್ಪ ಮಾಯ್ಯಪ್ಪ ಮತ್ತು ಚರಣ್ ಪಾಲ್ಗೊಂಡಿದ್ದರು.

