Home » ರೌಡಿ ಇಸಾಕ್‌ ಸರಕಾರಿ ಆಸ್ಪತ್ರೆಗೆ ಶಿಫ್ಟ್
 

ರೌಡಿ ಇಸಾಕ್‌ ಸರಕಾರಿ ಆಸ್ಪತ್ರೆಗೆ ಶಿಫ್ಟ್

by Kundapur Xpress
Spread the love

ಉಡುಪಿ : ಮಣಿಪಾಲ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕಾಲಿಗೆ ಗುಂಡು ಹೊಡೆಸಿಕೊಂಡಿರುವ ನಟೋರಿಯಸ್ ರೌಡಿ ಇಸಾಕ್‌ನ ಕಾಲಿಗೆ ಶಸ್ತ್ರಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಯಿಂದ ಉಡುಪಿ ಜಿಲ್ಲಾಸ್ಪತ್ರೆ ಗೆ ಸ್ಥಳಾಂತರಿಸಲಾಗಿದೆ.

ಗರುಡಾ ಗ್ಯಾಂಗ್‌ನ ಸದಸ್ಯ ಇಸಾಕ್ ಮತ್ತು ಇತರ 3 ಮಂದಿಯನ್ನು ಮಣಿಪಾಲ ಪೊಲೀಸರು ಚೆನ್ನರಾಯಪಟ್ಟಣದಲ್ಲಿ ಬಂಧಿಸಿ ಉಡುಪಿಗೆ ಕರೆತರುತ್ತಿದ್ದಾಗ ಹಿರಿಯಡ್ಕ ಬಳಿ ಇಸಾಕ್‌ ಎಂಬಾತ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲೆತ್ನಿಸಿದ್ದ. ಆದರೆ ಮಣಿಪಾಲ ಇನ್ಸ್‌ಪೆಕ್ಟರ್‌ ದೇವರಾಜ್, ಇಸಾಕ್‌ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದರು. ನಂತರ  ಅತನನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆತನ ಸಹಚರರಾದ ಸುರತ್ಕಲ್ ನಿವಾಸಿ ರಾಹಿದ್ (25), ಕೇರಳದ ಕಲ್ಲಿಕೋಟೆಯ ಸಾಮಿಲ್ ಕಾಸರಗೋಡು (26), ಮಂಜೇಶ್ವರದ ನಿಜಾಮುದ್ದೀನ್‌ (25)ನನ್ನು ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಈ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಿದೆ.

 

Related Articles

error: Content is protected !!