ಕಾರ್ಕಳ : ಬೋಳ್ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಗೋವಾ ಮದ್ಯ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಬೋಳ ಗ್ರಾಮದ ಅಬ್ಬನಡ್ಕದಲ್ಲಿರುವ ಅವನಿ ನಿಲಯದ ಮನೆಯಲ್ಲಿ ಮತ್ತು ಅದೇ ಗ್ರಾಮದ ಮರಿಮಾರು ಗುತ್ತು ಮನೆಯಲ್ಲಿ 272 ಪೆಟ್ಟಿಗೆಯ 2360.850 ಲೀ. ಗೋವಾ ಮದ್ಯವನ್ನು ಗುಪ್ತವಾಗಿ ಬಚ್ಚಿಟ್ಟಿದ್ದರು. ಅಬಕಾರಿ ಇಲಾಖೆ ತಂಡ ಕಾರ್ಯಾಚರಣೆ ನಡೆಸಿದ ಸಂದರ್ಭ ಆದಿ ಉಡುಪಿ ನಿವಾಸಿ ಪ್ರಶಾಂತ್ ಸುವರ್ಣ, ಅವಿನಾಶ್ ಮಲ್ಲಿ ಓಡಿ ಹೋಗಿದ್ದು, ಇಲಾಖೆ ಅಧಿಕಾರಿಗಳ ತಂಡ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.ಇದರ ಹಿಂದಿರುವ ಜಾಲದ ಬಗ್ಗೆಯೂ ವ್ಯವಸ್ಥಿತ ತನಿಖೆ ನಡೆಸಲಾಗುತ್ತಿದೆ ಎಂದು ಅಬಕಾರಿ ಉಪ ಆಯುಕ್ತ ಭಿಂದು ಶ್ರೀ ತಿಳಿಸಿದ್ದಾರೆ.