Home » ಚಿನ್ನಾಭರಣ ಕಳವು  ಆರೋಪಿಗಳ ಬಂಧನ
 

ಚಿನ್ನಾಭರಣ ಕಳವು  ಆರೋಪಿಗಳ ಬಂಧನ

by Kundapur Xpress
Spread the love

ಚಿನ್ನಾಭರಣ ಕಳವು  ಆರೋಪಿಗಳ ಬಂಧನ

ಉಡುಪಿ: ಮಂಗಳೂರು-ಮುಂಬೈ  ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೊಬ್ಬರ ಚಿನ್ನಾಭರಣವನ್ನು ದೋಚಿದ ಬಗ್ಗೆ ಮಣಿಪಾಲ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಪ್ರಕರಣವನ್ನು ಭೇದಿಸಿ ಚಿನ್ನಾಭರಣವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ

ಕಾಪು ನಿವಾಸಿಯಾದ ಪುನೀತ್‌ ವಸಂತ್‌ ಹೆಗ್ಡೆ ಎಂಬವರು ಮಂಬೈಗೆ ತೆರಳಲು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿ ಕೆಲವೇ ಹೊತ್ತಿನಲ್ಲಿ ಬ್ಯಾಗ್‌ ನಲ್ಲಿದ್ದ 100 ಗ್ರಾಮ್‌ ಚಿನ್ನಾಭರಣವು ಕಳವು ಆದ ಬಗ್ಗೆ ಮಣಿಪಾಲ ಠಾಣೆಗೆ ದೂರು ನೀಡಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಪೋಲೀಸರು ಕಾರ್ಯಾಚರಣೆ ನೆಡೆಸಿ ಬುಧವಾರ ಬೆಳಿಗ್ಗೆ 6.30 ಕ್ಕೆ ಶಿವಮೊಗ್ಗ ಮೂಲದ ಲಲಿತಾ ಬೋವಿ (41 ವರ್ಷ) ಹಾಗೂ ಸುಶೀಲಮ್ಮ ಬೋವಿ (64 ವರ್ಷ) ಎಂಬವರನ್ನು ಮಣಿಪಾಲದ ಟೈಗರ್‌ ಸರ್ಕಲ್‌ ಬಳಿ ಬಂಧಿಸಿ ಅವರಿಂದ 4 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 3 ಸಾವಿರ ಮೌಲ್ಯದ ವಾಚನ್ನು ಪೋಲೀಸರು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ 

   

Related Articles

error: Content is protected !!