ಬೆಂಗಳೂರು : ಪ್ರಿ ಸ್ಕೂಲ್ಗೆ ಬರುತ್ತಿದ್ದ ಮಗುವಿನ ತಂದೆಗೆ ಮುತ್ತು ಕೊಟ್ಟು ಹನಿಟ್ರ್ಯಾಪ್ ಮಾಡಿದ್ದಲ್ಲದೆ, 50 ಸಾವಿರ ರೂ. ಸುಲಿಗೆ ಮಾಡಿ. ಮತ್ತೆ ಬೆದರಿಕೆಯೊಡ್ಡಿ ಲಕ್ಷಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದಲ್ಲದೆ, ಮತ್ತಷ್ಟು ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟು ಹಣ ವಸೂಲಿ ಮಾಡಲು ಮುಂದಾದ ಟೀಚರ್ ಹಾಗೂ ಗ್ಯಾಂಗ್ ನ್ನು ಬೆಂಗಳೂರು ಪೊಲೀಸ್ ತಂಡ ಬಂಧಿಸಿದೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂಬಾಕೆಯೇ ಹನಿಟ್ರ್ಯಾಪ್ ಎಸಗಿದ ಶಿಕ್ಷಕಿ. ಸದ್ಯ ಶಿಕ್ಷಕಿ ಹಾಗೂ ಇನ್ನಿಬ್ಬರು ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಎನಿದು ಘಟನೆ…….?
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಮಹಿಳೆ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದಳು. ಉದ್ಯಮಿ ತಮ್ಮ ಮಗುವನ್ನು ಈಕೆಯ ಪ್ಲೇಹೋಮ್‌ಗೆ ಕಳಿಸುತ್ತಿದ್ದರು. ಸ್ನೇಹ ಬೆಳೆಸಿದ ನಂತರ ಆಕೆ ಉದ್ಯಮಿಗೆ ಶಾಲೆಯ ಅಭಿವೃದ್ಧಿ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಳು. ಮತ್ತೆ ವಾಪಾಸ್ ಮಾಡುತ್ತೇನೆ ಎಂದು ಹೇಳಿ ಹಣ ಪಡೆದಿದ್ದಳು, ಆದರೆ ವಾಪಾಸ್ ಕೇಳಿದಾಗ ಶಾಲೆಗೆ ಪಾರ್ಟ್‌ನರ್ ಆಗುವಂತೆ ಮನವೊಲಿಸಿದ್ದಳು. ಶಾಲೆಯ ಕೆಲಸಗಳು ನಡೆಯುವ ವೇಳೆ ಇಬ್ಬರ ನಡುವೆ ಸಲುಗೆ ಬೆಳೆದಿತ್ತು.
ನಂತರ ಸಲುಗೆ ಪ್ರೀತಿಗೆ ತಿರುಗಿತ್ತು. ಉದ್ಯಮಿ ಹಣವನ್ನು ವಾಪಾಸ್ ಕೇಳಿದ್ದಾಗ ಆಕೆ ನಿನಗಾಗಿ ಏನು ಮಾಡೋಕಾದ್ರೂ ರೆಡಿ ಎಂದಿದ್ದಳು. ಆಕೆಯ ಮಾತನ್ನು ನಂಬಿ ಆತ ಅವಳ ಮನೆಗೆ ಹೋಗಿದ್ದ. ಈ ವೇಳೆ ಒಂದು ಮುತ್ತು ಕೊಟ್ಟಿದ್ದು, ಅದಕ್ಕೆ ಐವತ್ತು ಸಾವಿರ ರೂಪಾಯಿ ಪಡೆದಿದ್ದಳು. ನಿನ್ನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುತ್ತೇನೆ ಎಂದು ಹೇಳಿ ಆತನ ನಂಬಿಕೆ ಗಳಿಸಿದ್ದಳು.
ನಂತರ 15 ಲಕ್ಷ ರೂಪಾಯಿ ಕೊಡು ಎಂದಿದ್ದಳು. ಆತ ಅದಕ್ಕೆ ಸಿಟ್ಟು ಮಾಡಿಕೊಂಡಿದ್ದ. ಇದಕ್ಕೆ ಶಿಕ್ಷಕಿ ಕೂಡ ಸಿಟ್ಟು ಮಾಡಿಕೊಂಡು ಉದ್ಯಮಿಯ ಪತ್ನಿಗೆ ಫೋನ್ ಮಾಡಿ ನಿಮ್ಮ ಪತಿಯನ್ನು ಶಾಲೆಗೆ ಕಳಿಸಿ ಕೆಲಸ ಇದೆ ಎಂದು ಹೇಳಿದ್ದಳು. ಶಾಲೆಗೆ ಬಂದಾಗ ಇಬ್ಬರು ರೌಡಿಗಳನ್ನು ಕರೆಸಿ ಅವಾಝ್ ಹಾಕಿಸಿದ್ದಳು. ನಿಮ್ಮ ವಿಷಯ ಎಲ್ಲರಿಗೂ ಹೇಳುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು. ಹೆದರಿ ಉದ್ಯಮಿ ಎರಡು ಲಕ್ಷ ರೂ. ಕೊಟ್ಟಿದ್ದರು.
ಇದಾದ ನಂತರ ಸುಮ್ಮನಾಗದ ಗ್ಯಾಂಗ್ ಶಿಕ್ಷಕಿ ಹಾಗೂ ಉದ್ಯಮಿಯ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡೋಕೆ ಶುರು ಮಾಡಿದ್ದರು. ಕಡೆಗೆ ಬೇಸತ್ತ ಉದ್ಯಮಿ ಪೊಲೀಸರ ಮೊರೆ ಹೋಗಿದ್ದರು. ಸದ್ಯ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದು ವಿಚಾರಣೆ ನಡೆಯುತ್ತಿದೆ.

