Home » ಅಪಘಾತ : ಐಪಿಎಸ್ ಅಧಿಕಾರಿ ದುರ್ಮರಣ
 

ಅಪಘಾತ : ಐಪಿಎಸ್ ಅಧಿಕಾರಿ ದುರ್ಮರಣ

ಕರ್ತವ್ಯದ ಮೊದಲ ದಿನವೇ ವಿಧಿವಶ

by Kundapur Xpress
Spread the love

ಹಾಸನ : ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಐಪಿಎಸ್ ಅಧಿಕಾರಿಯಾಗಿ ಅಧಿಕಾರ ದಂಡ ಹಿಡಿದು ಕಾರ್ಯಭಾರ ಆರಂಭಿಸಬೇಕಿದ್ದ ಯುವ ಅಧಿಕಾರಿಯೊಬ್ಬರು ವಿಧಿಯಾಟಕ್ಕೆ ಶರಣಾಗಿ ಕರ್ತವ್ಯದ ಮೊದಲ ದಿನವೇ ಉಸಿರು ಚೆಲ್ಲಿದ ದಾರುಣ ಘಟನೆ ನಡೆದಿದೆ

ಭಾನುವಾರ ಮೈಸೂರು-ಹಾಸನ ರಸ್ತೆಯ ಕಿತ್ತಾನೆ ಬಳಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಅಧಿಕಾರಿ ಹರ್ಷವರ್ಧನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಮಹಾರಾಷ್ಟ್ರ ಮೂಲದವರು.

ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಪೊಲೀಸ್ ಅಕಾಡೆಮಿಯಿಂದ ಆಗಮಿಸುತ್ತಿದ್ದ ಪ್ರೊಬೆಷನರಿ ಐಪಿಎಸ್ ಹರ್ಷವರ್ಧನ್ ಭಾನುವಾರ ನಿಯಂತ್ರಣ ತಪ್ಪಿದ ಜೀಪ್ ರಸ್ತೆ ಬದಿಯ ಮನೆಗೆ ಡಿಕ್ಕಿಯಾದ್ದರಿಂದ ಗಂಭೀರ ಗಾಯಗೊಂಡಿದ್ದರು

ಹರ್ಷವರ್ಧನ್ ಹಾಗೂ ಹಾಸನದ ಡಿಎಆರ್ ಕಾನ್ ಸ್ಟೇಬಲ್ ಮಂಜೇಗೌಡ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಕಡೆಗೂ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು.

ದಕ್ಷಿಣ ವಲಯ ಐಜಿ ಡಾ.ಬೋರಲಿಂಗಯ್ಯ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಕೃತಕ ಉಸಿರಾಟದಲ್ಲಿದ್ದ ಹರ್ಷವರ್ಧನ ಅವರು ಮೃತಪಟ್ಟಿರುವ ವಿಷಯ ತಿಳಿಸಲಾಯಿತು.

 

Related Articles

error: Content is protected !!