Home » 10 ದಿನ ಎನ್‌ಐಎ ವಶಕ್ಕೆ ಉಗ್ರರು
 

10 ದಿನ ಎನ್‌ಐಎ ವಶಕ್ಕೆ ಉಗ್ರರು

by Kundapur Xpress
Spread the love

ಬೆಂಗಳೂರು : ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಸೆರೆಯಾದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರರನ್ನು 10 ದಿನ ಎನ್‌ಐಎ ವಶಕ್ಕೆ ನೀಡಿ ನ್ಯಾಯಾಲಯವು ಶನಿವಾರ ಆದೇಶಿಸಿದೆ. ನಗರದ ವಿಶೇಷ ಎನ್ ಐಎ ನ್ಯಾಯಾಲಯದ ಮುಂದೆ ಶಂಕಿತ ಉಗ್ರರಾದ ಮುಸಾವೀರ್‌ ಹಾಗೂ ಮತೀನ್‌ನನ್ನು ಎನ್‌ಐಎ ಅಧಿಕಾರಿಗಳು ಹಾಜರುಪಡಿಸಿದರು. ಆಗ ಈ ವಿಧ್ವಂಸಕ ಕೃತ್ಯದ ಹಿಂದೆ ಜಾಗತಿಕ ಮಟ್ಟದ ಸಂಘಟನೆಗಳ ಕೈವಾಡವಿರುವ ಶಂಕೆ ಇದೆ. ಹೀಗಾಗಿ ತನಿಖೆ ಸಲುವಾಗಿ ಆರೋಪಿಗಳನ್ನು ಎನ್ಐಎ ವಶಕ್ಕೆ ನೀಡುವಂತೆ ಎನ್‌ಐಎ ಪರ ವಕೀಲ ಪ್ರಸನ್ನ ಕುಮಾರ್ ಕೋರಿದರು ನ್ಯಾಯಾಲಯ 10 ದಿನ ಎನ್‌ಐಎ ವಶಕ್ಕೆ ನೀಡಿತು

   

Related Articles

error: Content is protected !!