Home » ಜೀವ ಬೆದರಿಕೆ ದೂರು ದಾಖಲು
 

ಜೀವ ಬೆದರಿಕೆ ದೂರು ದಾಖಲು

by Kundapur Xpress
Spread the love

ಜೀವ ಬೆದರಿಕೆ ದೂರು ದಾಖಲು

ಕುಂದಾಪುರ:ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗುಜ್ಜಾಡಿ ಗ್ರಾಮದ ಕೊಡಪಾಡಿ ಎಂಬಲ್ಲಿ ಪರಿಶಿಷ್ಟ ಜಾತಿಯ ದೇವಿ ಎಂಬವರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ ದೇವಿಯವರು ಗಂಗೊಳ್ಳಿ ಠಾಣೆಗೆ ನೀಡಿದ ದೂರಿನಂತೆ ಸರ್ವೇ ನಂಬ್ರ 145/1/ಏ ಜಾಗವು ದೇವಿಯವರ ಹೆಸರಿನಲ್ಲಿದ್ದು ಜಾಗದ ಎದುರುಗಡೆ ಭಾರತಿ ಗಾಣಿಗ ನಾಗರಾಜ ಗಾಣಿಗ ಹಾಗೂ ಕೀರ್ತಿರಾಜ್‌ ಎಂಬವರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಗ್ರಾಮ ಪಂಚಾಯತ್‌ ಹಾಗೂ ಲೋಕೋಪಯೋಗಿ ಇಲಾಖೆಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರೂ ಕೂಡ ದಿನಾಂಕ 12.02.2023 ರಂದು ರಾತ್ರಿ 8.30ಕ್ಕೆ ದೇವಿಯವರ ಮನೆಗೆ ಹೋಗುವ ರಸ್ತೆಗೆ ಅಡ್ಡವಾಗಿ ಕಟ್ಟಡದ ಹಿಂಬಾಗದಲ್ಲಿ ಶೌಚಾಲಯದ ಗುಂಡಿ ನಿರ್ಮಿಸುತ್ತಿರುವಾಗ ದೇವಿಯವರು ಆಕ್ಷೇಪಣೆ ಮಾಡಿದ್ದು ಅಪಾದಿತರಾದ ಭಾರತಿ ಗಾಣಿಗ ನಾಗರಾಜ ಗಾಣಿಗ ಹಾಗೂ ಕೀರ್ತಿರಾಜ್‌ ಎಂಬವರು ದೇವಿಯವರೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳೊಂದಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

   

Related Articles

error: Content is protected !!