Home » ಮಲೇಷ್ಯಾ ದೇಗುಲದಲ್ಲಿ ಅರ್ಚಕರಿಂದ ಲೈಂಗಿಕ ಕಿರುಕುಳ : ನಟಿ ಲಿಶಾ
 

ಮಲೇಷ್ಯಾ ದೇಗುಲದಲ್ಲಿ ಅರ್ಚಕರಿಂದ ಲೈಂಗಿಕ ಕಿರುಕುಳ : ನಟಿ ಲಿಶಾ

by Kundapur Xpress
Spread the love

ಕೌಲಾಲಂಪುರ : ಸ್ಥಳೀಯ ದೇಗುಲದ ಅರ್ಚಕರೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಲೇಷ್ಯಾದ ತಮಿಳು ನಟಿ ಲಿಶಾಲಿನಿ ಕನರನ್ ಆರೋಪಿಸಿದ್ದಾರೆ. ಈ ಸಂಬಂಧ ಚೆನ್ನೈನಲ್ಲಿ ದೂರು ದಾಖಲಾಗಿದೆ.

ನಾನು ಜೂ.21 ರಂದು ಮಲೇಷ್ಯಾದ ಮಾರಿಯಮ್ಮ ಗುಡಿಗೆ ಹೋಗಿದ್ದೆ. ಅಲ್ಲಿ ಪೂಜೆ ಮಾಡಿಸಿದ ಬಳಿಕ ಅಲ್ಲಿದ್ದ ಭಾರತೀಯ ಮೂಲದ ಪುರೋಹಿತರು ನನ್ನನ್ನು ಪ್ರತ್ಯೇಕವಾಗಿ ಕೋಣೆಯೊಂದಕ್ಕೆ ಕರೆದು ನನ್ನ ಮೇಲೆ ಅತಿ ಘಾಟು ಇರುವ ದ್ರವ್ಯ ಹಾಕಿದರು. ನನ್ನ ಅನುಮತಿ ಇಲ್ಲದೇ ನನ್ನ ರವಿಕೆ ಒಳಗೆ ಕೈ ಹಾಕಿ ಅಸಭ್ಯವಾಗಿ ಸ್ಪರ್ಶಿಸಿದರು. ಚೆನ್ನೈಗೆ ಬಂದ ಮೇಲೆ ಅರ್ಚಕನ ವಿರುದ್ಧ ಪ್ರಕರಣ ದಾಖಲಿಸಿದೆ’ ಎಂದು ಇನಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 

Related Articles

error: Content is protected !!