Home » ಕೃಷಿ ಅಧಿಕಾರಿ ಬಳಿ 6 ಕೋಟಿ ಮೌಲ್ಯದ ಆಸ್ತಿ ಪತ್ತೆ
 

ಕೃಷಿ ಅಧಿಕಾರಿ ಬಳಿ 6 ಕೋಟಿ ಮೌಲ್ಯದ ಆಸ್ತಿ ಪತ್ತೆ

ಲೋಕಾಯುಕ್ತ ದಾಳಿ

by Kundapur Xpress
Spread the love

ಶಿವಮೊಗ್ಗ : ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕರೊಬ್ಬರು ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 6.34 ಕೋಟಿ ಆಸ್ತಿ ಪತ್ತೆಯಾಗಿದೆ.

ಡಾ.ಪ್ರದೀಪ್‌ ಗೆ ಸೇರಿದ 4 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ಬಳಿ ಒಟ್ಟು 5 ನಿವೇಶನ, 1 ಮನೆ, 16.7 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. ಇವುಗಳ ಮೌಲ್ಯ 4.45 ಕೋಟಿ ರು. ಆಗಿದೆ. ಬ್ಯಾಂಕ್ ಖಾತೆಯಲ್ಲಿ ಡಾ.ಪ್ರದೀಪ್ ಹೆಸರಿನಲ್ಲಿ  25 ಲಕ್ಷ  ಚಿನ್ನಾಭರಣ, 30 ಲಕ್ಷ ರು. ಮೌಲ್ಯದ ವಾಹನಗಳು, 15.50 ಲಕ್ಷದ ಮೇಕೆ ಮತ್ತು ಹಸುಗಳು, 50 ಲಕ್ಷದ ಫಾರ್ಮ ಹೌಸ್, ವಿದೇಶಿ ಬ್ಯಾಂಡ್ ಒಳಗೊಂಡಂತೆ 20 ವಾಚ್‌ಗಳು, 50 ಶೂಗಳು, 3 ಕಾರು, 3 ಬೈಕ್ ಪತ್ತೆಯಾಗಿವೆ.

 

Related Articles

error: Content is protected !!