87
ಗಂಗೊಳ್ಳಿ : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗ್ರಾಮದ ಮೆಡಿಕಲ್ ಶಾಪ್ ಬಳಿ ಮಲಗಿದ್ದ ದನಗಳನ್ನು ಕಳವು ಮಾಡಲು ವಿಫಲ ಯತ್ನ ನಡೆದಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗಂಗೊಳ್ಳಿ ಗ್ರಾಮದ ದಿಪೇಶ್ ಎಂಬುವರು ಅಭಿಜಿತ್ ಎಂಬುವರೊಂದಿಗೆ * ಭಾನುವಾರ ಬೆಳಿಗ್ಗಿನ ಜಾವ ಪಿಕ್ ಅಪ್ ವಾಹನದಲ್ಲಿ ಬೈಂದೂರಿನಿಂದ ಕೋಳಿಗಳನ್ನು ಲೋಡ್ ಮಾಡಿಕೊಂಡು ನಾಡಾಕ್ಕೆ ಕೋಳಿಗಳನ್ನು ಹಾಕಲು ಹೊರಟಿದ್ದು ನಾಡಾ ಗ್ರಾಮ ಪಂಚಾಯತ್ ಸಮೀಪ ಬಿಳಿ ಬಣ್ಣದ ಕಾರಿನಲ್ಲಿ ಮೂರು ಜನರು ನಾಡಾ ಮೆಡಿಕಲ್ ಪಕ್ಕದಲ್ಲಿ ಮಲಗಿರುವ ದನಗಳನ್ನು ಕಾರಿಗೆ ತುಂಬಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭ ಇವರ ವಾಹನವನ್ನು ನೋಡಿ ದನವನ್ನು ತುಂಬಿಸಲು ಪ್ರಯತ್ನಿಸಿದವರು ಓಡಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ

