ಕಾರವಾರ : ತರಕಾರಿ ಹಣ್ಣು ತುಂಬಿದ್ದ ಲಾರಿ ಕಂದಕಕ್ಕೆ ಉರುಳಿ ಸಂಭವಿಸಿದ ದುರ್ಘಟನೆಯಲ್ಲಿ ಗಾಯಾಳುಗಳಿಗೆ ತಕ್ಷಣವೇ ನೆರವು ಸಿಗಲಿಲ್ಲ ಮುಂಜಾನೆಯೇ ಘಟನೆ ನಡೆದಿದ್ದರಿಂದ ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಗಾಯಾಳುಗಳು ನೆರವಿಗಾಗಿ ಪರದಾಡಿದ್ದಾರೆ.
ಅಪಘಾತವು ಮುಂಜಾನೆ ಸುಮಾರು 4.00 ಗಂಟೆಗೆ ನಡೆದಿದೆ. ಆ ಹೊತ್ತಿನಲ್ಲಿ ಯಾರೂ ಕೂಡ ಅದೇ ರಸ್ತೆಯಲ್ಲಿ ಸಂಚರಿಸಿಲ್ಲ 5.30ರ ಸುಮಾರಿಗೆ ಮಂಗಳೂರಿಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗುಳ್ಳಾಪುರ ಬಳಿ ತರಕಾರಿ ಲಾರಿ ಉರುಳಿ ಬಿದ್ದಿರುವುದನ್ನು ಗಮನಿಸಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ
ಘಟನಾ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಟ್ರಕ್ ಅಡಿಯಿಂದ ಕೆಲವರು ಹೊರಬಂದಿದ್ದರು. ಲಾರಿ ಅಡಿಯಲ್ಲಿ ಕೆಲವರು ಸಿಲುಕಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಕ್ರೇನ್ ತರಿಸಿ ಟ್ರಕ್ ಮೇಲಕ್ಕೆ ಎಳೆದಾಗ ಅಡಿಯಲ್ಲಿ10 ಜನರು ಮೃತಪಟ್ಟಿರುವುದು ಕಂಡುಬಂತು