Home » ಲಾರಿ ಪಲ್ಟಿ : ಸಂಚಾರ ಬಂದ್
 

ಲಾರಿ ಪಲ್ಟಿ : ಸಂಚಾರ ಬಂದ್

by Kundapur Xpress
Spread the love

ಹುಬ್ಬಳ್ಳಿ  : ಹುಬ್ಬಳ್ಳಿ ಕಡೆಯಿಂದ ಮುಂಡಗೋಡ ಕಡೆಗೆ ಗೊಬ್ಬರವನ್ನು ತುಂಬಿಕೊಂಡು ಬರುತ್ತಿರುವ ಲಾರಿ ಪಲ್ಟಿಯಾಗಿ ಹುಬ್ಬಳ್ಳಿ ಶಿರಸಿಯ ವಾಹನ ಸಂಚಾರ ಬಂದಾದ ಘಟನೆ ನಡೆದಿದೆ

ಹುಬ್ಬಳ್ಳಿ ಕಡೆಯಿಂದ ಬೃಹತ್ ಗಾತ್ರದ ಲಾರಿಯೊಂದು ರಸಗೊಬ್ಬರ ತುಂಬಿಕೊಂಡು ಮುಂಡಗೋಡ ಕಡೆಗೆ ಬರುತ್ತಿರುವಾಗ ಹುಬ್ಬಳ್ಳಿ ರಸ್ತೆಯ ತಡಸ ಮುಂಡಗೋಡ ಮಧ್ಯದಲ್ಲಿರುವ ತಾಯವ್ವನ ದೇವಸ್ಥಾನ ಸನಿಹದಲ್ಲಿಯೇ ಆಕಸ್ಮಿಕವಾಗಿ ಲಾರಿ ಪಲ್ಟಿಯಾಗಿ ರಸ್ತೆ ಸಂಪೂರ್ಣವಾಗಿ ಬಂದಾಗಿದ್ದು ಇದರಿಂದ ತಾತ್ಕಾಲಿಕವಾಗಿ ವಾಹನ ಸಂಚಾರ ಬಂದಾಗಿದೆ.

ಹುಬ್ಬಳ್ಳಿಯಿಂದ ಬರುವ ವಾಹನಗಳು ತಡಸಿನಿಂದ ಕೋಣನಕೇರಿ ಮೂಲಕ ಹಾಗೂ ಶಿರಸಿ ಕಡೆಯಿಂದ ಹುಬ್ಬಳಿಗೆ ತೆರಳುವ ವಾಹನಗಳು ಮುಂಡಗೋಡದಿಂದ ಕೋಣನಕೇರಿ ಮಾರ್ಗದಿಂದ ಹುಬ್ಬಳಿಗೆ ತೆರಳುವಂತೆ ತಡಸ ಪೊಲೀಸರು ವಾಹನ ಸವಾರರಿಗೆ ತಿಳಿಸಿ ಸಹಕರಿಸುತ್ತಿದ್ದಾರೆ

 

Related Articles

error: Content is protected !!