ಮಣಿಪಾಲ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ನಿರ್ದೇಶನ ಮೇರೆಗೆ ಮಣಿಪಾಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ 80 ಡಿಸಿಬಲ್ ಕಿಂತ ಹೆಚ್ಚು ಶಬ್ದಕ್ಕೆ ಕಾರಣವಾಗುತ್ತಿದ್ದ
ಕರ್ಕಶ ಶಬ್ದದ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ದ್ವಿಚಕ್ರ ವಾಹನದಲ್ಲಿನ ಅನಧಿಕೃತ ಸೈಲೆನ್ಸರ್ ವಿರುದ್ಧ ಕಳೆದ 6 ತಿಂಗಳಿನಿಂದ ಕಾರ್ಯಾಚರಣೆ ನಡೆಸಿ ವಾಹನಗಳಲ್ಲಿ ಅಳವಡಿಸಿದ ಅನಧಿಕೃತ ಸೈಲೆನ್ಸರ್ ಗಳನ್ನು ವಶಪಡಿಸಿಕೋಳ್ಳಲಾಯಿತು
ಹೀಗೆ ವಶಪಡಿಸಿಕೊಂಡ ಸೈಲೆನ್ಸರ್ ಗಳ ಮೇಲೆ ರೋಲರ್ ನ್ನು ಹಾಯಿಸುವ ಮೂಲಕ ಅದನ್ನು ನಾಶಪಡಿಸಲಾಯಿತು ಈ ಸಂದರ್ಭದಲ್ಲಿ ಉಡುಪಿ ಡಿ ವೈ ಎಸ್ ಪಿ ದಿನಕರ್ ಮಣಿಪಾಲ್ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ಹಾಗೂ ಎಎಸ್ಐ ನವೀನ್ ಉಪಸ್ಥಿತರಿದರು