ಕುಂದಾಪುರ : ಪರವಾನಿಗೆ ಇಲ್ಲದೆ ಮಿನಿ ಟಿಪ್ಪರ್‌ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೆಂಪು ಕಲ್ಲುಗಳನ್ನು ಗಂಗೊಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ್ ಕನಶೆಟ್ಟಿ ಅವರು ಸಿಬ್ಬಂದಿಗಳೊಂದಿಗೆ ಆಲೂರು ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಆಲೂರು ಕಡೆಯಿಂದ ಹರ್ಕೂರು ಕಡೆಗೆ ಬರುವ ರಸ್ತೆಯ ಕೊಪ್ಪಟ್ಟೆ ಎಂಬಲ್ಲಿ ಮಿನಿ ಟಿಪ್ಪರ್‌ನಲ್ಲಿ ಕೆಂಪು ಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿರುವ ಮಾಹಿತಿ ಮೇರೆಗೆ ಮಿನಿ ಟಿಪರ್‌ನ್ನು ನಿಲ್ಲಿಸಿ ಪರೀಶಿಲಿಸಿದಾಗ ಅದರಲ್ಲಿ 120 ಕೆಂಪು ಕಲ್ಲುಗಳು ಇರುವುದು ಕಂಡು ಬಂದಿದೆ.
ಮಿನಿ ಟಿಪ್ಪರ್ ಚಾಲಕ ಮೋಹನ ಹಾಗೂ ಮಾಲೀಕ ರಾಜು ಎಂಬುವರು ಸೇರಿ ಎಲ್ಲಿಂದಲೋ ಕೆಂಪು ಕಲ್ಲುಗಳನ್ನು ಕಳವು ಮಾಡಿ ಅವುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.