138
ಸೋನಿಪತ್ : ಸೋನಿಪತ್ ನ ಕಾಲುವೆಯಲ್ಲಿ ಗಂಟಲು ಸೀಳಿದ ಸ್ಥಿತಿಯಲ್ಲಿ ಹರ್ಯಾಣ ಮೂಲದ ರೂಪದರ್ಶಿ ಶೀತಲ್ ಅವರ ಮೃತದೇಹ ಪತ್ತೆಯಾಗಿದೆ.
ಕೊಲೆಗೆ ಕಾರಣ ಪತ್ತೆಯಾಗಿಲ್ಲ. ಅವರು ಹರಿಯಾಣಿ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ‘ಶೀತಲ್ ತಮ್ಮ ತಂಗಿ ನೇಹಾ ಜತೆ ಪಾಣಿಪತ್‌ನಲ್ಲಿ ವಾಸವಿದ್ದರು. ಜೂ.14ರಂದು ಶೂಟಿಂಗ್‌ಗಾಗಿ ಅಹರ್‌ಹಳ್ಳಿಗೆ ತೆರಳಿದ್ದರು. ಮರಳಿ ಮನೆಗೆ ಬರದಿದ್ದಾಗ, ಅವರ ತಂಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನಿಖೆ ವೇಳೆ ಖಾಂಡಾ ಹಳ್ಳಿಯ ಸಮೀಪದ ಕಾಲುವೆಯಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ’ ತಿಳಿಸಿದ್ದಾರೆ.
ಪೊಲೀಸರು ಶೀತಲ್ ಪ್ರಿಯಕರ ಸುನಿಲ್ ನನ್ನು ಬಂಧಿಸಿದ್ದಾರೆ

