Home » ಲವ್ ಫೇಲ್ : ಪ್ರಿಯಕರನ ಹೆಸರಲ್ಲಿ ಉಡುಪಿ ಶಾಲೆ ಸೇರಿ 21 ಕಡೆ ಬಾಂಬ್ ಬೆದರಿಕೆ ಕರೆ
 

ಲವ್ ಫೇಲ್ : ಪ್ರಿಯಕರನ ಹೆಸರಲ್ಲಿ ಉಡುಪಿ ಶಾಲೆ ಸೇರಿ 21 ಕಡೆ ಬಾಂಬ್ ಬೆದರಿಕೆ ಕರೆ

by Kundapur Xpress
Spread the love

ಅಹಮದಾಬಾದ್ : ತಾನು ಪ್ರೀತಿಸುತ್ತಿದ್ದ ವ್ಯಕ್ತಿ ತನ್ನನ್ನು ಮದುವೆಯಾಗಲು ಒಪ್ಪದೆ, ಬೇರೆ ಯುವತಿಯನ್ನು ವಿವಾಹವಾದ ಕಾರಣ, ಸೇಡಿಗಾಗಿ ಯುವತಿಯೊಬ್ಬಳು ಉಡುಪಿ ಶಾಲೆ ಸೇರಿದಂತೆ ದೇಶಾದ್ಯಂತ 21 ಕಡೆ ಬಾಂಬ್ ಬೆದರಿಕೆ ಇಮೇಲ್ ಕಳಿಸಿದ ಘಟನೆ ನಡೆದಿದೆ. ಗುಜರಾತ್ ನಲ್ಲಿ ಇಂತಹ 12 ಬೆದರಿಕೆ ಗಳನ್ನು ಒಡ್ಡಲಾಗಿದೆ. ಆರೋಪಿಯನ್ನು ಚೆನ್ನೈನಲ್ಲಿ ನೆಲೆಸಿರುವ ರೆನೆ ಜೋಶಿಲ್ಲಾ ಎಂದು ಗುರುತಿಸಲಾಗಿದೆ.

ದಿವಿಜ್ ಪ್ರಭಾಕರ್ ಎನ್ನುವವರನ್ನು ರೆನೆ ಮೋಹಿಸುತ್ತಿದ್ದಳು. ಆದರೆ ಆತ ಆಕೆಯನ್ನು ನಿರಾಕರಿಸಿ ಬೇರೆ ಹುಡುಗಿಯ ಕೈಹಿಡಿದಿದ್ದ. ಇದರಿಂದ ಕುಪಿತಳಾದ ರೆನೆ, ತನ್ನ ತಾಂತ್ರಿಕ ಪಾಂಡಿತ್ಯವನ್ನು ಬಳಸಿ ನಕಲಿ ಇಮೇಲ್ ಐಡಿ, ವಿಪಿಎನ್, ಡಾರ್ಕ್ ವೆಬ್ ಇತ್ಯಾದಿಗಳನ್ನು ರಚಿಸಿ, ಅವು ಗಳ ಮೂಲಕ ದಿವಿಜ್ ಹೆಸರಲ್ಲಿ ದೇಶದ ವಿವಿಧ ಶಾಲೆ, ಕಾಲೇಜು, ಸ್ಟೇಡಿಯಂ ಸೇರಿ 21 ಸ್ಥಳಗಳಿಗೆ ಬಾಂಬ್ ಬೆದರಿಕೆ ರವಾನಿಸಿದ್ದಳು. ತನಿಖೆ ವೇಳೆ ಆಕೆಯ ಹೆಸರು ಪತ್ತೆಯಾಗಿ ರೆನೆಯನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ.

 

Related Articles

error: Content is protected !!