ಕಾರ್ಕಳ : ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆಗೈದ ಘಟನೆ ಕಾರ್ಕಳ ತಾಲೂಕು ಮರ್ಗ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದೆ.
ಬಾಲಕೃಷ್ಣ ಪೂಜಾರಿ (44ವರ್ಷ) ಕೊಲೆಯಾದವರು. ಅವರ ಪತ್ನಿ ಪ್ರತಿಮಾ ಹಾಗೂ ಕಾರ್ಕಳದ ದಿಲೀಪ್ ಹೆಗ್ಡೆ ಕೊಲೆ ಆರೋಪಿಗಳಾಗಿದ್ದು, ಅವರನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ದಿಲೀಪ್ ಹೆಗ್ಡೆಗೆ ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರತಿಮಾಳನ್ನು ಮಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ
ಕೊರೋನಾ ಸಂದರ್ಭದಲ್ಲಿ ಮುಂಬೈನಿಂದ ಊರಿಗೆ ಬಂದಿದ್ದ ಬಾಲಕೃಷ್ಣ ದಂಪತಿ, ನಿಟ್ಟೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈ ಕುಟುಂಬ ಕಳೆದ ವರ್ಷ ನ.1 ರಂದು ಹೊಸಮನೆ ಕಟ್ಟಿಸಿದ್ದರು. ಈ ಹೊಸ ಮನೆಗೆ ಒಂದು ವರ್ಷ ಆಗುವ ಮೊದಲೇ ಮನೆಯ ಯಜಮಾನನ ಕೊಲೆಯಾಗಿದೆ. ಬಾಲಕೃಷ್ಣ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದ್ದು ಶಾಲೆಗೆ ಹೋಗುತ್ತಿದ್ದಾರೆ
ಗೆಳೆಯನ ಸಾವಿಗೆ ನ್ಯಾಯ ಒದಗಿಸಿದ ಅಣ್ಣ
ಮೃತ ಬಾಲಕೃಷ್ಣ ಹಾಗೂ ಪತ್ನಿ ಪ್ರತಿಮಾಳ ಅಣ್ಣ ಸಂದೀಪ್ ಮುಂಬೈಯಲ್ಲಿ ಜತೆಗೆ ಉದ್ಯೋಗ ಮಾಡುತ್ತಿದ್ದು, ಆಪ್ತ ಸ್ನೇಹಿತರಾಗಿದ್ದರು, ಕೊಲೆ ಎಂದು ಅನುಮಾನಗೊಂಡ ಹಿನ್ನೆಲೆ ಸಂದೀಪ್ ಪೊಲೀಸರಿಗೆ ದೂರು ಕೊಡ ನೀಡಿದ್ದರು. ಆದರೆ ಗುರುವಾರ ಮಧ್ಯಾಹ್ನ ತಂಗಿ ಪ್ರತಿಮಾ, ತನ್ನ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆ ಮಾಡಿದ್ದು ನಾನೇ ಎಂದು ಅಣ್ಣನ ಬಳಿ ತಿಳಿಸಿದ್ದಳು. ತಂಗಿಯನ್ನು ನೇರವಾಗಿ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೂಲಕ ತನ್ನ ಮಿತ್ರ ಬಾಲಕೃಷ್ಣನ ಸಾವಿಗೆ ನ್ಯಾಯ ಒದಗಿಸಿದ್ದಾರೆ.