Home » ಸುಹಾಸ್ ಶೆಟ್ಟಿ ಕೊಲೆ : ಮೂವರ ಬಂಧನ
 

ಸುಹಾಸ್ ಶೆಟ್ಟಿ ಕೊಲೆ : ಮೂವರ ಬಂಧನ

by Kundapur Xpress
Spread the love

ಮಂಗಳೂರು : ಬಿಜೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಳವಾರು ಆಶ್ರಯ ಕಾಲೊನಿ ನಿವಾಸಿ ಅಜರುದ್ದೀನ್ ಯಾನೆ ಅಜರ್ ಯಾನೆ ಅಜ್ಜು (29), ಕಾಪು ಸಮೀಪದ ಬದ್ರಿಯ ನಗರ ಬೆಳಪು ನಿವಾಸಿ ಅಬ್ದುಲ್ ಖಾದರ್ ಯಾನೆ ನೌಫಲ್ (24), ಫರಂಗಿಪೇಟೆ ಕುಂಪನಮಜಲು ನಿವಾಸಿ ನೌಷದ್ ಯಾನೆ ವಾಮಂಜೂರು ನೌಷದ್ ಯಾನೆ ಚೊಟ್ಟೆ ನೌಷದ್ (39) ಬಂಧಿತರು.

ಬಂಧಿತರ ಪೈಕಿ ಅಜರುದ್ದೀನ್ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿದೆ. ಈತನು ಪ್ರಕರಣದ ಆರೋಪಿಗಳಿಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿದವನಾಗಿದ್ದಾನೆ.

 

Related Articles

error: Content is protected !!