ಮೀರತ್ : ಉತ್ತರ ಪ್ರದೇಶದ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಮರ್ಚೆಂಟ್ ನೇವಿ ಆಫೀಸರ್ ಆಗಿದ್ದ ತನ್ನ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಬಳಿಕ ಮಹಿಳೆ ಮತ್ತು ಆಕೆಯ ಪ್ರಿಯಕರ ಮೃತದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಸಿಮೆಂಟ್ ತುಂಬಿದ ಡ್ರಮ್‌ನಲ್ಲಿರಿಸಿ ಮುಚ್ಚಿದ್ದಾರೆ
ಕೊಲೆಯಾದ ಸೌರಭ್
ಮೀರತ್‌ನಲ್ಲಿರುವ ಅವರ ನಿವಾಸದಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದು ಸುಮಾರು 15 ದಿನಗಳಾಗಿದ್ದು, ಸಿಮೆಂಟ್ ತುಂಡುಗಳಲ್ಲಿ ಡ್ರಮ್‌ನಲ್ಲಿ ಪತ್ತೆಯಾದ ಶವವನ್ನು ವಶಪಡಿಸಿಕೊಂಡ ನಂತರ ಆರೋಪಿಗಳಾದ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.
ಸೌರಭ್ ರಜಪೂತ್ ಮತ್ತು ಮುಸ್ಕಾನ್ ರಸ್ತೋಗಿ 2016 ರಲ್ಲಿ ವಿವಾಹವಾಗಿದ್ದರು. ಐದು ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಮೀರತ್‌ಗೆ ಬಂದಿದ್ದ ನೌಕಾಧಿಕಾರಿ ಸೌರಭ್ ರಜಪೂತ್‌ನನ್ನು ಆತನ ಪತ್ನಿಯೇ ಪ್ರಿಯಕರನ ನೆರವಿನಿಂದ ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದಾಳೆ. ಸೌರಭ್ ರಜಪೂತ್ ಹಲವು ದಿನಗಳಿಂದ ಕಾಣಿಸದಿದ್ದಾಗ ಅವರ ಕುಟುಂಬವು ದೂರು ದಾಖಲಿಸಿದೆ ಎಂದು ಮೀರತ್ ನಗರ ಪೊಲೀಸ್ ಮುಖ್ಯಸ್ಥ ಆಯುಷ್ ವಿಕ್ರಮ್ ಸಿಂಗ್ ಹೇಳಿದ್ದಾರೆ.

