Home » ನೀರಿನಲ್ಲಿ  ಮುಳುಗಿಸಿ ಮಗಳನ್ನೇ ಕೊಂದ ತಾಯಿ
 

ನೀರಿನಲ್ಲಿ  ಮುಳುಗಿಸಿ ಮಗಳನ್ನೇ ಕೊಂದ ತಾಯಿ

by Kundapur Xpress
Spread the love

ಹಾಸನ : ನೀರಿನ ತೊಟ್ಟಿಯಲ್ಲಿ ಮುಳುಗಿಸಿ 6 ವರ್ಷದ ಮಗಳನ್ನೇ ತಾಯಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಆರು ವರ್ಷದ ಸಾನ್ವಿ ಕೊಲೆಯಾದ ದುರ್ದೈವಿ ಶ್ವೇತಾ (36 ವರ್ಷ) ಮಗಳನ್ನೇ ಕೊಂದ ಆರೋಪಿ

ಮಗು ಕಿರುಚಾಡುತ್ತಿದ್ದನ್ನು ಕೇಳಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿಬಂದಿದ್ದಾರೆ. ಕೂಡಲೇ ವರಸೆ ಬದಲಿಸಿ ನಾನು ಮಗು ಇಬ್ಬರೂ ಸಾಯಲು ಪ್ರಯತ್ನಿಸಿದ್ದೆವು ಎಂದು ಗ್ರಾಮಸ್ಥರಿಗೆ ಶ್ವೇತಾ ಹೇಳಿಕೊಂಡಿದ್ದಾರೆ. ತಕ್ಷಣವೇ ಬಾಲಕಿಯನ್ನು ಎತ್ತಿಕೊಂಡು ಗ್ರಾಮಸ್ಥರು ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಹಿರಿಸಾವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

 

Related Articles

error: Content is protected !!