ಬೈಂದೂರು: ಅರೆಹೊಳೆ ಕ್ರಾಸ್ನಲ್ಲಿನ ಆರೋಗ್ಯ ವರ್ಧಿನಿ ಕ್ಲಿನಿಕ್ ನಿಂದ ಔಷದಿ ತೆಗೆದುಕೊಂಡು ಬಂದು ಹೇರೂರಿನ ಹೇರಿಕೇರಿಗೆ ಹೋಗಲು ಅರೆಹೊಳೆ ಬಸ್ ಸ್ಟ್ಯಾಂಡ್ ಸಮೀಪ ರಸ್ತೆ ದಾಟಲು ರಸ್ತೆಬದಿಯಲ್ಲಿ ನಿಂತುಕೊಂಡಿದ್ದ ದೇವಿ ಎಂಬವರಿಗೆ ಬೈಕ್ ಸವಾರ ಅಶ್ಪಕ್ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ನಿಂತಿದ್ದ ದೇವಿರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ ತಕ್ಷಣ ಸ್ಥಳೀಯರು ಅವರನ್ನು 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದೇವಿಯವರನ್ನು ದಾಖಲಿಸಲಾಗಿದೆ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ