ಉಡುಪಿ : ಕಲ್ಯಾಣಪುರದ ಮನೆಯೊಂದರಲ್ಲಿ ತಡರಾತ್ರಿವರೆಗೆ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಬಳಸಿದ್ದ ಬಗ್ಗೆ ಸಾರ್ವಜನಿಕರ ದೂರಿನ ಮೇಲೆ ಮಲ್ಪೆ ಪೊಲೀಸರು ದಾಳಿ ನಡೆಸಿದ್ದಾರೆ.ಕಲ್ಯಾಣಪುರ ಶೇಖರ ಬೈಕಾಡಿ ಅವರ ಮಗಳ ಮದುವೆ ಪ್ರಯುಕ್ತ ಮೆಹಂದಿ ಶಾಸ್ತ್ರಕ್ಕೆ ತಡರಾತ್ರಿವರೆಗೆ ಡಿಜೆ ಬಳಸಿ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಸ್ಥಳೀಯರು ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ನಂದಾದೀಪ ಹೆಸರಿನ ಡಿಜೆ ಸೌಂಡ್ಸ್ ಎಂದು ತಿಳಿದು ಬಂದಿದ್ದು, ಅದರ ಮಾಲೀಕ ನವೀನ್ ಕವರಿಗೆ ಸಂಬಧಿಸಿದ್ದಾಗಿರುತ್ತದೆ. ತಕ್ಷಣ ಡಿಜೆ ಸೌಂಡ್ ನಿಲ್ಲಿಸಿದ ಪೊಲೀಸರು ಮನೆಯ ಮಾಲೀಕ ಶೇಖರ್ ಬೈಕಾಡಿ ಮತ್ತು ಸೌಂಡ್ ಸಿಸ್ಟಮ್‌ನ ಮಾಲಕ್ಷ ನವೀನ್ ಅವರ ಮೇಲೆ ಕೇಸ್ ದಾಖಲಿಸಿದ್ದಾರೆ