Home » ಹೇರಿಕುದ್ರು ಸೇತುವೆ ಬಳಿ ಉರುಳಿದ ಕಾರು
 

ಹೇರಿಕುದ್ರು ಸೇತುವೆ ಬಳಿ ಉರುಳಿದ ಕಾರು

by Kundapur Xpress
Spread the love

ಕುಂದಾಪುರ : ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ಹೇರಿಕುದ್ರು ಸೇತುವೆ ಬಳಿಯ ತಿರುವಿನಲ್ಲಿ ಕಾರೊಂದು ಉರುಳಿ ಬಿದ್ದಿದೆ  ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ.

ಗಂಗೊಳ್ಳಿಯಿಂದ ಮಲ್ಪೆ ಕಡೆಗೆ ಗಂಗೊಳ್ಳಿಯ ನಿವಾಸಿ ಮೊಹಮ್ಮದ್ ಸಾದ್ (31) ಎಂಬುವರು ಚಲಾಯಿಸುತ್ತಿದ್ದ ಕಾರು ಹೇರಿಕುದ್ರುವಿನ ಅಂಡರ್‌ಪಾಸ್‌ ಬಳಿಯ ಬೊಬ್ಬರ್ಯ ದೈವಸ್ಥಾನದ ಎದುರಿನಲ್ಲಿ, ಕಾರು ನಿಯಂತ್ರಣ ತಪ್ಪಿ ಕೆಳಕ್ಕೆ ಪಲ್ಟಿಯಾಗಿ ಬಿದ್ದಿದೆ. ಪಲ್ಟಿಯಾಗುತ್ತ ಸರ್ವಿಸ್ ರಸ್ತೆಯೂ ದಾಟಿ ಮರವೊಂದಕ್ಕೆ ತಾಗಿ ನಿಂತಿದೆ. ಇಲ್ಲದಿದ್ದರೆ ಸಮೀಪದಲ್ಲಿಯೇ ಇದ್ದ ನದಿಗೆ ಪಲ್ಟಿಯಾಗಿ ಬೀಳುವ ಸಾಧುತೆ ಇತ್ತು

ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!