ಉಡುಪಿ : ಶೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದು ಎಂಬ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 21 ಲಕ್ಷ ರೂ. ಕಳೆದುಕೊಂಡ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರಾದ ಬಾಪ್ಟಿಸ್ ಮೌರಿಸ್ ಲೋಬೋ ಅವರ ಮೊಬೈಲ್ ನಂಬರನ್ನು ಅಪರಿಚಿತರು ವಾಟ್ಸಾಪ್ ಗ್ರೂಪೊಂದಕ್ಕೆ ಸೇರ್ಪಡೆ ಮಾಡಿದ್ದು, ಈ ಗ್ರೂಪ್‌ನಲ್ಲಿ ಶೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಂಶ ನೀಡುವುದಾಗಿ ನಂಬಿಸಿದ್ದಾರೆ.
ಅದರಂತೆ ಬಾಪ್ಟಿಸ್ ಹಾಗೂ ತಾಯಿಯ ಬ್ಯಾಂಕ್‌ಗಳ ಖ್ಯಾತೆಯಿಂದ 2024 ರ ಡಿ.2 ರಿಂದ 2025 ರ ಜ.6 ರವರೆಗೆ ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 21,39,903ರೂ ಹಣವನ್ನು ಹೂಡಿಕೆ ಮಾಡಿದ್ದಾರೆ ನಂತರದಲ್ಲಿ ದೂರುದಾರರು ಹೂಡಿಕೆ ಮಾಡಿದ ಹಣವನ್ನಾಗಲಿ ಶೇರು ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.