ಉದ್ಯೋಗ ವಂಚನೆ
ಉಡುಪಿ: ಆನ್ ಲೈನ್ ನಲ್ಲಿ ಉದ್ಯೋಗ ಕೊಡಿಸುವುದಾಗೆ ನಂಬಿಸಿ ವ್ಯಕ್ತಿಯೋರ್ವರಿಗೆ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ ಮಾಧವಿ ಎಂಬವರು ಉದ್ಯೋಗ ಹುಡುಕುತ್ತಿರುವಾಗ ಮಾ.15ರಂದು ವಾಟ್ಸ್ ಆಪ್ ನಲ್ಲಿ ಮಾರ್ಚ್ 15 ರಂದು ಅಪರಿಚಿತನೊಬ್ಬ ಆನ್ ಲೈನ್ ನಲ್ಲಿ ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ ನಂಬಿಸಿ ಮಾ.15ರಿಂದ ಮಾ20.ರವರೆಗೆ 2,52,600ರೂ.ಗಳನ್ನು ಆರೋಪಿಯ ವಿವಿಧ ಖಾತೆಗಳಿಗೆ ಜಮೆ ಮಾಡಿಸಿಕೊಂಡು ಉದ್ಯೋಗ ನೀಡದೇ ವಂಚನೆ ಮಾಡಿರುವುದಾಗಿ ಉಡುಪಿಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.