ಉಡುಪಿ : ಉಡುಪಿಯ ಯುವತಿಯೊಬ್ಬರು ಇನ್ ಸ್ಟಾಗ್ರಾಂನಲ್ಲಿ ಪಾರ್ಟ್ ಟೈಮ್ ಜಾಬ್‌ನ ಬಗ್ಗೆ ಲಿಂಕ್ ಒತ್ತಿ ಬರೋಬ್ಬರಿ 2.00 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.
ನಿಶ್ಚಿತಾ ಎಂಬವರು ಇನ್ ಸ್ಟಾಗ್ರಾಮ್ ನಲ್ಲಿ ಪಾರ್ಟ್ ಟೈಮ್ ಜಾಬ್ ಜಾಹೀರಾತು ‘ನಂಬಿ ಲಿಂಕ್ ಅನ್ನು ಕ್ಲಿಕ್ ಮಾಡಿ ನೋಂದಣಿ ಮಾಡಿಕೊಂಡಿದ್ದರು. ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೆಲವೊಂದು ಟಾಸ್ಕ್ ಗಳನ್ನು ನೀಡಿದ್ದು, ಟಾಸ್ಟ್ ಪೂರ್ಣಗೊಳಿಸಿದ ಬಳಿಕ ಟೆಲಿಗ್ರಾಂ ಆ್ಯಪ್‌ನಲ್ಲಿ ಸಂಪರ್ಕಿಸಿದ್ದಾರೆ. ನಂತರ ತಾವು 3,61,415 ರೂ. ಹಣವನ್ನು ಗಳಿಸಿದ್ದೀರಿ ಎಂಬುದಾಗಿ ನಂಬಿಸಿ ಹಣವನ್ನು ಪಡೆಯಲು ತೆರಿಗೆ ಹಾಗೂ ಖಾತೆಯನ್ನು ಚಾಲ್ತಿಯಲ್ಲಿ ಇಡಲು ಅಪರಿಚಿತರು ತಿಳಿಸಿದಂತೆ ಯುಪಿಐ ಮೂಲಕ ದೂರುದಾರರು ಜು.11ರಿಂದ ಜು. 14ರವರೆಗೆ ಹಂತ ಹಂತವಾಗಿ ಒಟ್ಟು ರೂಪಾಯಿ 2,06,507 ರೂಪಾಯಿಗಳನ್ನು ಓನ್ ಲೈನ್ ಮುಖೇನಾ ವರ್ಗಾಯಿಸಿದ್ದಾರೆ. ಆದರೆ ಟಾಸ್ಕ್ ಮೂಲಕ ಗಳಿಸಿದ ಹಣ ಹಾಗೂ ತಾನು ಪಾವತಿಸಿದ ಹಣವನ್ನು ವಾಪಾಸು ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.