Home » ಗಾಂಜಾ ಮಾರಾಟ : ವಿದೇಶಿ ಪ್ರಜೆ ಬಂಧನ
 

ಗಾಂಜಾ ಮಾರಾಟ : ವಿದೇಶಿ ಪ್ರಜೆ ಬಂಧನ

by Kundapur Xpress
Spread the love

ಬೆಂಗಳೂರು : ಸ್ಥಳೀಯ ಗಿರಾಕಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಟಿ, ಬಿಟಿ ಉದ್ಯೋಗಿಗಳಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಕ್ರಿಸ್ಟೆಲ್‌ನ್ನು ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. 4 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಚ್ಯುತನಗರದ ಮನೆಯೊಂದರಲ್ಲಿ ಆಫ್ರಿಕಾ ದೇಶದ ಪ್ರಜೆಗಳಾದ ವೋಕಾಸ್ ಡೇನಿಯಲ್ (40) ಎಂಬುವನನ್ನು ಬಂಧಿಸಿದ್ದಾರೆ. ಮತ್ತೋರ್ವ ವ್ಯಕ್ತಿ ತಲೆಮರಿಸಿಕೊಂಡಿದ್ದಾನೆ. ಇಬ್ಬರು ವ್ಯಾಪಾರ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಇಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ, ಬಿಟಿ ಕಂಪನಿಯವರಿಗೆ ಮಾರಾಟ ಮಡುತ್ತಿದ್ದರು. ನಿಖರ ಮಾಹಿತಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಯಿಂದ 2 ಕೆಜಿ ಈಗ ಜೊತೆಗೆ ದ್ವಿಚಕ್ರ ವಾಹನ, ಪೋನ್ ಒಟ್ಟಾರೆ ಇದರ ಮೌಲ್ಯ 4 ಕೋಟಿ ಎಂದು ಅಂದಾಜಿಸಲಾಗಿದೆ

 

Related Articles

error: Content is protected !!