Home » A1 ಪವಿತ್ರಾ A2 ದರ್ಶನ್‌ : ಚಾರ್ಜ್ ಶೀಟ್‌ ಸಲ್ಲಿಕೆ
 

A1 ಪವಿತ್ರಾ A2 ದರ್ಶನ್‌ : ಚಾರ್ಜ್ ಶೀಟ್‌ ಸಲ್ಲಿಕೆ

by Kundapur Xpress
Spread the love

 ಬೆಂಗಳೂರು : ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ನಟ ದರ್ಶನ್ ಹಾಗೂ ಅವರ ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ 3991 ಪುಟಗಳ ಬೃಹತ್ ಆರೋಪಪಟ್ಟಿಯನ್ನು ನಿನ್ನೆ ಬುಧವಾರ ಪೊಲೀಸರು ಸಲ್ಲಿಸಿದ್ದಾರೆ. ‘ಇದರಲ್ಲಿ *ಇಡೀ ಕೃತ್ಯಕ್ಕೆ ಕಾರಣ ಆಗಿದ್ದು ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳಿಸಿದ್ದ ಅಶ್ಲೀಲ ಸಂದೇಶ’ ಎಂದು ಉಲ್ಲೇಖಿಸಲಾಗಿದೆ.

ಎಸಿಎಂಎಂ ನ್ಯಾಯಾಲಯಕ್ಕೆ 7 ಸಂಪುಟಗಳ ಆರೋಪ ಪಟ್ಟಿಯನ್ನು ತನಿಖಾಧಿಕಾರಿ ಹಾಗೂ ವಿಜಯನಗರ ಉಪ ವಿಭಾಗದ ಎಸಿಪಿ ಎನ್. ಚಂದನ್ ಕುಮಾರ್ ಸಲ್ಲಿಸಿದ್ದಾರೆ.

ಆರೋಪಪಟ್ಟಿಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್ ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಮಾಡಿ ದರ್ಶನ್ ಗ್ಯಾಂಗ್‌ ಬರ್ಬರವಾಗಿ ಹತ್ಯೆಗೈದಿದೆ. ಇದಕ್ಕೆ ಸಾಂದರ್ಭಿಕ, ವೈದ್ಯಕೀಯ, ಪ್ರತ್ಯಕ್ಷ ಹಾಗೂ ವೈಜ್ಞಾನಿಕ ಪುರಾವೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ

   

Related Articles

error: Content is protected !!