Home » ದರ್ಶನ್ ಜಾಮೀನು ರದ್ದಿಗೆ 1492 ಪುಟಗಳ ಮಾಹಿತಿ
 

ದರ್ಶನ್ ಜಾಮೀನು ರದ್ದಿಗೆ 1492 ಪುಟಗಳ ಮಾಹಿತಿ

by Kundapur Xpress
Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾಗೌಡ ಹಾಗೂ ಇತರ ಏಳು ಮಂದಿಗೆ ನೀಡಲಾಗಿರುವ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸುಪ್ರೀಂಕೋಟ್ ೯ಗೆ 1492 ಪುಟಗಳ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಮೇಲ್ಮನವಿ ವಿಚಾರಣೆ ಶುಕ್ರವಾರ ನಡೆಯಲಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪರಿದಿವಾಲಾ ಹಾಗೂ ಆರ್.ಮಹದೇವನ್ ಅವರ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.

ವಕೀಲ ಅನಿಲ್ ನಿಶಾನಿ ಅವರ ಮೂಲಕ ರಾಜ್ಯ ಪ್ರಾಸಿಕ್ಯೂಷನ್ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದು, ಆ ಬೃಹತ್ ಕಡತದಲ್ಲಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ ಐಆರ್ ಹಾಗೂ ದೂರಿನ ಪ್ರತಿ, ಮರಣೋ ತ್ತರ ಪರೀಕ್ಷೆ ವರದಿ, ಆರೋಪಿಗಳ ಗೌಂಡ್ಸ್ ಆಫ್ ಅರೆಸ್ಟ್ ಕುರಿತು ನೀಡಿರುವ ಪ್ರತಿ, ಪ್ರತ್ಯಕ್ಷದರ್ಶಿಗಳ ಸಾಕ್ಷಿ ಹೇಳಿಕೆಗಳು, ಮರಣೋತ್ತರ ವರದಿ ಮೇಲೆ ವೈದ್ಯರಿಂದ ಪಡೆದ ಹೆಚ್ಚುವರಿ ಅಭಿಪ್ರಾಯ ವರದಿ, ಸೆಷನ್ ಕೋರ್ಟ್‌ ತೀರ್ಪು, ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಸಾಮಾನ್ಯ ಹಾಗೂ ಮಧ್ಯಂತರ ಜಾಮೀನಿಗೆ ಸಂಬಂಬಂಧಿಸಿದ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ

 

Related Articles

error: Content is protected !!