Home » ರೀಲ್‌ ಹೀರೋ ರಿಯಲ್‌ ವಿಲನ್
 

ರೀಲ್‌ ಹೀರೋ ರಿಯಲ್‌ ವಿಲನ್

by Kundapur Xpress
Spread the love

ಬೆಂಗಳೂರು : ನಟಿ ಪವಿತ್ರಾ ಗೌಡ ಕುರಿತು ಸೋಷಿಯಲ್ ಮೀಡಿಯಾ ಅವಹೇಳನಕಾರಿ ಕಾಮೆಂಟ್ ವಿಚಾರವಾಗಿ ಚಿತ್ರದುರ್ಗದಿಂದ ಅಪಹರಿಸಿಕೊಂಡು ನಗರಕ್ಕೆ ಕರೆತಂದ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಗ್ಯಾಂಗ್, ಕೊಲೆಗೂ ಮುನ್ನ ಭಾರಿ ರೋಷಾವೇಷ ತೋರಿಸಿದೆ

ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಪಟ್ಟಣಗೆರೆ ಗ್ರಾಮದ ತಮ್ಮ ಸ್ನೇಹಿತ ದೀಪಕ್ ಪಾಲುದಾರಿಕೆಯ ಶೆಡ್ ನಲ್ಲಿ ರೇಣುಕಾಸ್ವಾಮಿಯನ್ನು ದರ್ಶನ್ ಅಕ್ರಮ ಬಂಧನದಲ್ಲಿಟ್ಟಿದ್ದರು. ಆನಂತರ ದರ್ಶನ್ ಗ್ಯಾಂಗ್ ಆತನನ್ನು ಪುಟ್ಬಾಲ್ ನಂತೆ ಮನ ಬಂದಂತೆ ಒದ್ದು ಹಿಂಸಿಸಿದಲ್ಲದೆ ಬಳಿಕ ಆತನಿಗೆ ದೊಣ್ಣೆ ಹಾಗೂ ಬೆಲ್ಟ್ ಗಳಿಂದ ಸಹ ಹೊಡೆದಿದೆ. ಖುದ್ದು ರೇಣುಕಾ ಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಲ್ಲೆ ಪರಿಣಾಮ ರೇಣುಕಾಸ್ವಾಮಿ ಮೃತದೇಹದ ಮೇಲೆ ಎದೆ, ಹೊಟ್ಟೆ, ಬೆನ್ನು ಹಾಗೂ ಕಾಲುಗಳಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದವು. ಈ ಹಲ್ಲೆ ವೇಳೆ ಉಪಸ್ಥಿತಳಿದ್ದ ಪವಿತ್ರಾ ಗೌಡ, ರೇಣುಕಾಸ್ವಾಮಿ ಮೇಲಿನ ಹಲ್ಲೆಯನ್ನು ಪ್ರಚೋದಿಸಿದ್ದಾಳೆ. ಈ ಕಾರಣಕ್ಕೆ ಆಕೆ ಬಂಧನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

Related Articles

error: Content is protected !!