ಮಂಗಳೂರು : ತಾನು ಕೆಲಸ ಮಾಡಿಕೊಂಡಿದ್ದ ಬ್ಯಾಂಕ್ ನಲ್ಲೇ ನಿವೃತ್ತ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕೊಡಿಯಾಲ್‌ಬೈಲಿನಲ್ಲಿ ಗುರುವಾರ ನಡೆದಿದೆ. ಅಳಿಕೆ ನಿವಾಸಿ ಗಿರಿಧರ್ ಯಾದವ್ (61) ಅತ್ಮಹತ್ಯೆಗೆ ಶರಣಾದವರು
ಗಿರಿಧರ್ ಅವರು ಕೊಡಿಯಾಲಬೈಲಿನ ಬ್ಯಾಂಕ್ ಒಂದರಲ್ಲಿ ಆಟಿಂಡರ್ ಕೆಲಸ ನಿರ್ವಹಿಸುತ್ತಿದ್ದು ಇತ್ತೀಚಿಗೆ ನಿವೃತ್ತರಾಗಿದ್ದರು. ಆದರೆ ಆ ಬಳಿಕವೂ ಬ್ಯಾಂಕ್‌ಗೆ ಬಂದು ಹೋಗುತ್ತಿದ್ದರು. ಅದರಂತೆ ಬುಧವಾರವೂ ಬಂದಿದ್ದ ಅವರು ಮನೆಗೆ ಹೋಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ಬಂದರು ಠಾಣೆಗೆ ದೂರು ನೀಡಿದ್ದರು. ಗುರುವಾರ ಬೆಳಗ್ಗೆ ಬ್ಯಾಂಕಿನ ಸಿಬ್ಬಂದಿ ಸ್ಟೋರ್ ರೂಂ ತೆರೆದಾಗ ಅಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗಿರಿಧರ್ ದೇಹ ಪತ್ತೆಯಾಗಿದೆ. ಬ್ಯಾಂಕ್‌ಗೆ ಬಂದಿದ್ದ ಅವರು ಮೂತ್ರಶಂಕೆಗೆಂದು ಸ್ತೋರ್ ರೂಂ ಕಡೆಗೆ ಹೋಗಿದ್ದು ಬಳಿಕ ಅಲ್ಲೇ ಅವಿತು ಕುಳಿತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪವರ್ ಲಿಪ್ಪರ್ ಆಗಿದ್ದ ಯಾದವ್ ಹಲವು ಪದಕಗಳನ್ನು ಪಡೆದಿದ್ದರು. ಇತ್ತೀಚಿಗೆ ಹಲವು ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಘಟನೆ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

