ಕುಂದಾಪುರ : ಕರ್ನಾಟಕ ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ವೀಕ್ಷಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸರಕಾರಿ ನೌಕರ ಕುಂದಾಪುರದ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಶಾಸ್ತ್ರೀ ಪಾರ್ಕ್ ಸಮೀಪದ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಿರಿಯ ಆರೋಗ್ಯ ವೀಕ್ಷಣಾಧಿಕಾರಿಯನ್ನು ಶಿವಮೊಗ್ಗ ಮೂಲದ ಪ್ರಶಾಂತ್ (37ವರ್ಷ) ಎಂದು ಗುರುತಿಸಲಾಗಿದೆ.
ಶಿವಮೊಗ್ಗ ಮೂಲದ ಪ್ರಶಾಂತ್ ವಿವಾಹಿತನಾಗಿದ್ದು, ಒಂದು ಪುಟ್ಟ ಮಗುವಿದೆ. 2010ರಲ್ಲಿ ಆರೋಗ್ಯ ಇಲಾಖೆಗೆ ಸೇರಿದ್ದ ಪ್ರಶಾಂತ್ ಕಾರ್ಕಳದಲ್ಲಿ ಸೇವೆಗೆ ಸೇರಿದ್ದರು. ಬಳಿಕ ಕುಂದಾಪುರ ತಾಲೂಕಿನ ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಬಳಿಕ ಬೈಂದೂರು ಸಮುವಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಯಾಗಿದ್ದರು
ಮಾನಸಿಕವಾಗಿ ನೊಂದಿದ್ದು ಜೀವನದಲ್ಲಿ ಜಿಗುಪ್ಪೆ ಉಂಟಾಗಿದೆ ಎಂದು ಆಗಾಗ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ. ಸ್ನೇಹಿತರು ಆತನಿಗೆ ಬುದ್ದಿ ಹೇಳಿ ಸಮಾಧಾನಿಸುತ್ತಿದ್ದರು ಆದರೆ ಗುರುವಾರ ಕುಂದಾಪುರದ ಖಾಸಗಿ ಲಾಡ್ಜ್‌ನಲ್ಲಿ ರೂಮ್ ಪಡೆದಿದ್ದು, ಮಲಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ ಆತ ಯಾವುದೋ ವಿಷ ಪದಾರ್ಥ ಸೇವಿಸಿರಬಹುದು ಎಂದು ಅಂದಾಜಿಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ