ಮಂಗಳೂರು : ಬ್ಯಾಂಕ್ ಸಾಲದ ಕಾರಣಕ್ಕೆ ಕಿರುಕುಳ ಕೊಟ್ಟಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ನಗರದ ಖಾಸಗಿ ಬ್ಯಾಂಕ್ ಅಧ್ಯಕ್ಷರನ್ನು ಪೊಲೀಸರು ಬಂಧಿಸಿದ್ದಾರೆ.ಉಳಾಯಿಬೆಟ್ಟು ಕುಟಿನೋ ಪದವು ನಿವಾಸಿ ಮನೋಹರ್ ಪಿರೇರಾ (47) ಮಂಗಳವಾರ ವಿಡಿಯೋ ಮಾಡಿ ವಾಟ್ಸಪ್ ಗ್ರೂಪಿನಲ್ಲಿ ಹಾಕಿದ ಬಳಿಕ ನೇಣು ಬಿಗಿದುಕೊಂಡಿದ್ದರು.
10 ವರ್ಷದ ಹಿಂದೆ ಮನೆ ಖರೀದಿಗೆ ಮನೋಹರ ಖಾಸಗಿ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಕೋವಿಡ್ ಬಳಿಕ ಸಾಲ ಪಾವತಿಸದ ಕಾರಣ ಮನೆಯನ್ನು ಬ್ಯಾಂಕ್ ಜಪ್ತಿ ಮಾಡಿತ್ತು. ನಂತರ ಮನೋಹರ್15 ಲಕ್ಷವನ್ನು ಜಮೆ ಮಾಡಿದ್ದರು. ಈ ಹಣವನ್ನು ಸಾಲಕ್ಕೆ ಜಮಾ ಮಾಡದೆ ಅಧ್ಯಕ್ಷರು ಸ್ವಂತಕ್ಕೆ ಬಳಸಿ ಕೊಂಡಿದ್ದಾರೆ ಎಂದು ಮನೋಹರ್ ಆರೋಪಿಸಿದ್ದಾರೆ. ಕಾನೂನಿನಡಿ ವಸೂಲಾತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.