ಕುಂದಾಪುರ : ಸಮೀಪದ ಕಂದಾವರ ಗ್ರಾಮದ ಬೊಬ್ಬರ್ಯ ಕೊಡ್ಲುವಿನ ಮದಗದಲ್ಲಿ ಈಜಾಡಲು ತೆರಳಿದ ನಾಲ್ವರಲ್ಲಿ ಒಬ್ಬರು ಮುಳುಗಿ ಮೃತಪಟ್ಟಿದ್ದು ಅವರನ್ನು ರಕ್ಷಿಸಲು ಹೋದ ಮತ್ತೊಬ್ಬರು ಮುಳುಗಿ ಮೃತಪಟ್ಟ ಘಟನೆ ಮೂಡ್ಲಕಟ್ಟೆಯಲ್ಲಿ ನಡೆದಿದೆ
ಸೋಮವಾರ ಸಂಜೆ ಕಂದಾವರ ಗ್ರಾಮದ ಬೊಬ್ಬರ್ಯ ಕೊಡ್ಲುವಿನ ಮದಗದಲ್ಲಿ ಈಜಾಡಲು ನಾಲ್ವರು ನೀರಿಗಿಳಿದಿದ್ದು ಅವರು ಮುಳುಗುತ್ತಿರುವುದನ್ನು ಗಮನಿಸಿದ ರಾಜೇಂದ್ರ ಶೆಟ್ಟಿಗಾರ್ ಎಂಬವರು ಅವರ ರಕ್ಷಣೆಗೆ ಮುಂದಾಗಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು ಆದರೆ ಭರತ್ ಶೆಟ್ಟಿಗಾರ್ ನನ್ನು ರಕ್ಷಿಸುವ ಹಂತದಲ್ಲಿ ಸ್ವತಃ ತಾನೆ ಮುಳುಗಿ ಸಾವನ್ನಪ್ಪಿದರು
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಭರತ್ ಶೆಟ್ಟಿಗಾರ್ (16ವರ್ಷ) ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದು ರಾಜೇಂದ್ರ ಶೆಟ್ಟಿಗಾರ್(27) ಉಪನ್ಯಾಸಕರಾಗಿದ್ದಾರೆ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ