200
ಹಾಸನ : ಟೆಸ್ಟ್‌ಡೈವ್ ನೆಪದಲ್ಲಿ ಸ್ಕೂಟರ್ ನೊಂದಿಗೆ ಪರಾರಿಯಾದ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದ್ದು ದೂರು ದಾಖಲಾಗಿದೆ.
ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ನಿವಾಸಿ ಸುಮಂತ್ ಸ್ಕೂಟರ್ ಕಳೆದುಕೊಂಡವರು. ಮ ಬಳಿ ಬಂದ ಅಪರಿಚಿತ ವ್ಯಕ್ತಿ ಮಾರಾಟಕ್ಕಿದ್ದ ಸ್ಕೂಟರ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ. ಅದಕ್ಕೂ ಮೊದಲು ಒಂದು ಬಾರಿ ಟೆಸ್ಟ್ ರೈಡ್ ನೋಡುತ್ತೇನೆಂದು ಹೇಳಿ ಕೀ ಪಡೆದು ಸ್ಕೂಟರ್‌ನೊಂದಿಗೆ ತೆರಳಿದವನು ವಾಪಸು ಬಾರಲೇ ಇಲ್ಲ ಎಂದು ಸುಮಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

