ತೆಲಂಗಾಣ : ಕರ್ತವ್ಯ ನಿಷ್ಠೆ ಎಲ್ಲರಿಗೂ ಇರಬೇಕು. ಅದು ಇಲ್ಲವಾದರೆ ಎಂತಹ ರಾದ್ಧಾಂತ ಆಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ತೆಲಂಗಾಣದಲ್ಲಿ ಕಳ್ಳನೊಬ್ಬ ಹೊಸ ವರ್ಷದ ಹಿಂದಿನ ದಿನ ಬಾರ್‌ಗೆ ಕಳ್ಳತನ ಮಾಡಲು ನುಗ್ಗಿದ್ದಾನೆ. ಅವನು ಎಲ್ಲವನ್ನು ದೋಚಿದ್ದಾನೆ. ಆದರೆ ಅಲ್ಲಿದ್ದ ಒಂದು ಮದ್ಯದ ಬಾಟಲಿ ಆತನ ಕಣ್ಣನ್ನು ಎಳೆದು ಹೊಟ್ಟೆ ತುಂಬಿಸಿದೆ. ಅದು ಎಷ್ಟರ ಮಟ್ಟಿಗೆ ನಶೆ ಏರಿಸಿತ್ತು ಎಂದರೆ ಆತ ಅಲ್ಲೇ ಮಲಗಿ ಬಿಟ್ಟಿದ್ದಾನೆ. ಮರುದಿನ ಬಾರ್ ಮಾಲೀಕ ಬಂದು ಆತನನ್ನು ಕಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಗ ಕಳ್ಳ ಅಯ್ಯೋ ನಾನೆಂತ ತಪ್ಪು ಮಾಡಿದೆ ಎಂದು ಬಾಯಿ ಬಾಯಿ ಬಡಿದುಕೊಂಡಿದ್ದಾನೆ