Home » ಗ್ರಾಹಕನ ಸೋಗಿನಲ್ಲಿ ಕರಿಮಣಿ ಸರ ಕಳ್ಳತನ
 

ಗ್ರಾಹಕನ ಸೋಗಿನಲ್ಲಿ ಕರಿಮಣಿ ಸರ ಕಳ್ಳತನ

by Kundapur Xpress
Spread the love

ಕಾರ್ಕಳ : ಚಿನ್ನ ಖರೀದಿ ನೆಪದಲ್ಲಿ ಆಭರಣ ಅಂಗಡಿಗೆ ಬಂದ ಕಳ್ಳನೋರ್ವ ಮಹಿಳಾ ಸಿಬ್ಬಂದಿಯ ಕಣ್ಣೆದುರಿನಲ್ಲೇ ಚಿನ್ನದ ಕರಿಮಣಿ ಸರ ಎಗರಿಸಿಕೊಂಡು ಪರಾರಿಯಾದ ಘಟನೆ ಕಾರ್ಕಳ ನಗರದ ರಥಬೀದಿಯ ಎಸ್ ಜೆ‌ ಅರ್ಕೆಡ್ ಬಳಿ‌ ನಡೆದಿದೆ.

ಚಿನ್ನ ಖರೀದಿಗಾಗಿ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನಿಗೆ ಮಹಿಳಾ ಸಿಬ್ಬಂದಿ ಆಭರಣಗಳನ್ನು ತೋರಿಸಲು ಮುಂದಾಗಿದ್ದಾರೆ. ಈ ವೇಳೆ ಕೈಗೆ ಸಿಕ್ಕ ಚಿನ್ನದ ಸರವನ್ನು ಎಳೆದುಕೊಂಡು ಕಳ್ಳ ಪರಾರಿಯಾಗಿದ್ದಾನೆ.

ಕಳವಾದ ಕರಿಮಣಿ ಸರ ಸುಮಾರು 30 ಗ್ರಾಂ ತೂಕದ ಚಿನ್ನದ್ದು ಎನ್ನಲಾಗಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸಿಸಿ ಟಿವಿ ಫೂಟೇಜ್ ಆಧರಿಸಿ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

Related Articles

error: Content is protected !!