Home » ನಾಲ್ವರು ಖತರ್‌ನಾಕ್‌ ಕಳ್ಳರ ಸೆರೆ
 

ನಾಲ್ವರು ಖತರ್‌ನಾಕ್‌ ಕಳ್ಳರ ಸೆರೆ

ಕುಂದಾಪುರ ಪೊಲೀಸರ ಕಾರ್ಯಾಚರಣೆ

by Kundapur Xpress
Spread the love

ಕುಂದಾಪುರ : ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಪಿಎಂಸಿ ಅಧೀನದ ಕಟ್ಟಡದಲ್ಲಿನ ಅಂಗಡಿಯೊಂದರ ಶಟರ್ ಮುರಿದು 95 ಸಾವಿರ ರೂ. ಮೌಲ್ಯದ ತಾಮ್ರದ ವಯರ್, ಹಿತ್ತಾಳೆಯ ವಸ್ತುಗಳನ್ನು ಕಳ್ಳತನಗೈದಿದ್ದ ನಾಲ್ವರು ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ

ಆರೋಪಿಗಳಾದ ಮಂಗಳೂರಿನ ಸರ್ಫರಾಜ್ (33‌ ವರ್ಷ)  ಜಾಕೀರ್‌ (36 ವರ್ಷ) ಮೊಹಮ್ಮದ್ ಅಲ್ಪಾಜ್ (26 ವರ್ಷ) ಹಾಗೂ ಮಂಜನಾಡಿಯ ಮೊಹಮ್ಮದ್ ರಿಯಾಜ್ (44 ವರ್ಷ) ರವರನ್ನು ಉಡುಪಿಯ ಸಂತೆಕಟ್ಟೆಯಲ್ಲಿಕುಂದಾಪುರ ಪೊಲೀಸರು ಬಂಧಿಸಿದ್ದಾರೆ

ಆರೋಪಿಗಳಿಂದ 50 ಕೆಜಿ ತೂಕದ ತಾಮ್ರದ ಸರಿಗೆ, 34ಕೆಜಿ ತೂಕದ ತಾಮ್ರದ ಸರಿಗೆ, 64 ಕೆಜಿ ತೂಕದ ಹಿತ್ತಾಳೆಯ ವಸ್ತು, 20 ಕೆಜಿ – ತೂಕದ ಅಲ್ಯೂಮಿನಿಯಂ ವಸ್ತು, ಫ್ರಿಡ್ಜ್ – ಕಂಪ್ರೆಸರ್, 45 ಹಳೆಯ ಮೊಬೈಲ್‌ಗಳು  ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ

ಕುಂದಾಪುರ ನಗರ ಎಸ್‌ಐಗಳಾದ ನಂಜಾ ನಾಯ್ಕ, ಠಾಣಾಧಿಕಾರಿ ಪುಷ್ಪಾ ಸಂಚಾರ ಎಸ್‌ಐ ನೂತನ್‌,ಸಿಬಂದಿ ಮೋಹನ್, ಸಂತೋಷ್,  ಪ್ರೀನ್ಸ್, ನಾಗೇಶ್, ಮಹಾಬಲ, ರೇವತಿ, ಘನಶ್ಯಾಮ್, ಸತೀಶ್  ಅವರು ಕಾರ್ಯಾಚರಣೆಯಲ್ಲಿ – ಭಾಗವಹಿಸಿದ್ದರು. 

 

Related Articles

error: Content is protected !!