ಕುಂದಾಪುರ : ಸಾಗರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬೈಂದೂರು ಶಾಖೆಯ ವಾಹನ ಚಾಲಕ ಸಂತೋಷ್ ಅವರನ್ನು ಅಡ್ಡಗಟ್ಟಿ ಬೆದರಿಕೆಯೊಡ್ಡಿದ ಬಗ್ಗೆ ದೂರು ದಾಖಲಾಗಿದೆ. ಸಾಲ ವಸೂಲಾತಿಯ ಬಗ್ಗೆ ಸಿಬ್ಬಂದಿಯೊಂದಿಗೆ ಸೊಸೈಟಿಯ ಜೀಪಿನಲ್ಲಿ ಹೋಗುತ್ತಿರುವಾಗ ಉಪ್ಪುಂದ ಅಂಡರ್ ಪಾಸ್ ಬಳಿ ರೋಶನ್ ಹಾಗೂ ಇತರೆ ಮೂವರು ಕಾರಿನಲ್ಲಿ ಆಗಮಿಸಿ ವಾಹನ ಅಡ್ಡಗಟ್ಟಿ ಚಾಲಕನ ಕಾಲರ್ ಪಟ್ಟಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.