Home » ಯೋಗೇಶ್ ಗೌಡ ಕೊಲೆ : ವಿನಯ್ ಜಾಮೀನು ರದ್ದು
 

ಯೋಗೇಶ್ ಗೌಡ ಕೊಲೆ : ವಿನಯ್ ಜಾಮೀನು ರದ್ದು

by Kundapur Xpress
Spread the love

ಹೊಸದಿಲ್ಲಿ : ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆಘಾತ ನೀಡಿದ್ದು, ಅವರ ಜಾಮೀನನ್ನು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅವರು ಮತ್ತೆ ಜೈಲು ಸೇರಬೇಕಾದ ಭೀತಿ ಎದುರಾಗಿದೆ

ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ವಿನಯ್ ಕುಲಕರ್ಣಿಗೆ ಜಾಮೀನು ರದ್ದುಪಡಿಸಬೇಕೆಂದು ಕೇಂದ್ರ ತನಿಖಾ ದಳ(ಸಿಬಿಐ) ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಸಿಬಿಐ ವಾದವನ್ನು ಪರಿಗಣಿಸಿ ಜಾಮೀನನ್ನು ರದ್ದುಗೊಳಿಸಿದೆ.

 

Related Articles

error: Content is protected !!