278
ಬೆಳ್ತಂಗಡಿ : ವೇಣೂರು ಸಮೀಪದ ಕರಿಮಣೇಲು ಎಂಬಲ್ಲಿ ಬೆಂಗಳೂರು ಸಿಐಡಿ ಪೊಲೀಸ್ ಅರಣ್ಯ ಘಟಕದ ತಂಡವು 125 ಕೆಜಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರಕ್ತ ಚಂದನ ಮರವನ್ನು ವಶಕ್ಕೆ ಪಡೆದುಕೊಂಡು ವೇಣೂರು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ ರಕ್ತ ಚಂದನ ಸಾಗಾಟ ಮಾಡಿದ ಆರೋಪಿಗಳಾದ ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ನಿವಾಸಿ ಖಾಲಿದ್ ಹಾಗೂ ಗುರುವಾಯನಕೆರೆ ನಿವಾಸಿ ದೀಕ್ಷಿತ್ ಎಂಬುವರನ್ನು ಬಂಧಿಸಲಾಗಿದೆ ಮತ್ತೊಬ್ಬ ಆರೋಪಿ ಸಂತೋಷ್ ತಲೆಮರೆಸಿಕೊಂಡಿದ್ದಾನೆ

